ಕಾಂಗ್ರೆಸ್‌-ಜೆಡಿಎಸ್‌ ವಿರುದ್ಧ ಅಖಾಡಕ್ಕಿಳಿದ ಅಮಿತ್ ಶಾ : ರಾಜ್ಯದಲ್ಲಿ ಶುರುವಾಗಿದೆ ಹೊಸ ಗೇಮ್‌ ಪ್ಲಾನ್‌ !

ಬೆಂಗಳೂರು : ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಭಾರೀ ಕುತೂಹಲಗಳಿಗೆ ಸಾಕ್ಷಿಯಾಗಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದು, ಈಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ಹೊಸ ಗೇಮ್‌ ಪ್ಲಾನ್‌ ಮಾಡಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಪರೇಶನ್‌ ಫ್ಲವರ್‌ ಹೆಸರಿನಡಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆಪರೇಷನ್‌ ಫ್ಲವರ್‌ಗೆ  ನಾಲ್ಕು ತಂಡಗಳನ್ನು ರಚನೆ ಮಾಡಿದ್ದು, ಪಕ್ಷೇತರರನ್ನು ಹಾಗೂ ಇತರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬಗ್ಗೆ ಅಸಮಾಧಾನವಿರುವವರನ್ನು ನಹುಡುಕಿ  ಕಮಲದ ತೆಕ್ಕೆಗೆ ಹಾಕಿಕೊಳ್ಳುವ ಪ್ಲಾನ್‌ ನಡೆಯುತ್ತಿದೆ.

ಬಿಎಸ್‌ವೈ, ಶ್ರೀರಾಮುಲು, ಸಿ.ಪಿ ಯೋಗೀಶ್ವರ್‌ ಹಾಗೂ ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಸರಳ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲು ಬಿಜೆಪಿ ಎಲ್ಲಾ ರೀತಿಯ ಮಾಸ್ಟರ್‌ ಪ್ಲಾನ್‌ ಮಾಡಿದೆ.

 

Leave a Reply