ಜಮೀರ್ ಕಾರಿಗಾಗಿ ಬೇಡಿಕೆ ಇಟ್ಟಿದ್ದಾಯ್ತು…ಈಗ ಸಿದ್ದರಾಮಯ್ಯ ಇದ್ದ ನಿವಾಸವೇ ಬೇಕೆಂದು ಪಟ್ಟು ಹಿಡಿದ ಪರಮೇಶ್ವರ್ !!

ಬೆಂಗಳೂರು : ಈ ಹಿಂದೆ ಜಮೀರ್ ಅಹಮದ್‌ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಫಾರ್ಚೂನರ್‌ ಕಾರಿಗಾಗಿ ಬೇಡಿಕೆ ಇಟ್ಟಿದ್ದ ಬೆನ್ನಲ್ಲೇ ಈಗ ಡಿಸಿಎಂ ಪರಮೇಶ್ವರ್‌ ಸಿದ್ದರಾಮಯ್ಯ ಇದ್ದ ಮನೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನನಗೆ ಸಿದ್ದರಾಮಯ್ಯ ತಂಗಿದ್ದ ಕಾವೇರಿ ನಿವಾಸವನ್ನೇ ನೀಡಬೇಕು ಎಂದು ಪರಮೇಶ್ವರ್ ಪಟ್ಟು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕ್ರೆಸಂಟ್ ರಸ್ತೆಯಲ್ಲಿರುವ ಎಚ್‌.ಕೆ ಪಾಟೀಲ್ ಅವರ ನಿವಾಸ ಬೇಕು ಎಂದು ಡಿಕೆಶಿ   ಪಟ್ಟು ಹಿಡಿದಿದ್ದಾರಂತೆ. ಹೀಗಂತ ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚೆಗಷ್ಟೇ ಸಿದ್ದರಾಮಯ್ಯ ಬಳಸುತ್ತಿದ್ದ ಕಾರು ನನಗೇ ಬೇಕು ಎಂದು ಜಮೀರ್ ಅಹಮದ್‌ ಪಟ್ಟು ಹಿಡಿದಿದ್ದರು. ಆದರೆ ಕುಮಾರಸ್ವಾಮಿ ಜಮೀರ್ ಬೇಡಿಕೆಯನ್ನು ನಿರಾಕರಿಸಿದ್ದು, ಆ ಕಾರನ್ನು ಹಿರಿಯ ಮಂತ್ರಿಗಳಿಗೆ ನೀಡೋಣ ಎಂದಿದ್ದರು. ಈಗ ಪರಮೇಶ್ವರ್ ನಿವಾಸಕ್ಕಾಗಿ ಪಟ್ಟು ಹಿಡಿದಿದ್ದು, ಡಿಸಿಎಂ ಬೇಡಿಕೆಗೆ ಕುಮಾರಸ್ವಾಮಿ ಒಪ್ಪುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

 

4 thoughts on “ಜಮೀರ್ ಕಾರಿಗಾಗಿ ಬೇಡಿಕೆ ಇಟ್ಟಿದ್ದಾಯ್ತು…ಈಗ ಸಿದ್ದರಾಮಯ್ಯ ಇದ್ದ ನಿವಾಸವೇ ಬೇಕೆಂದು ಪಟ್ಟು ಹಿಡಿದ ಪರಮೇಶ್ವರ್ !!

Leave a Reply

Your email address will not be published.