ಹಿಂದಿನಿಂದ ಬಂದು ಯುವತಿಯ ಸೊಂಟ ಹಿಡಿದ ಕಾಮುಕ…..ಆಮೇಲೆ ಆಗಿದ್ದೇ ಬೇರೆ…?

ಬೆಂಗಳೂರು : ರಸ್ತೆ ಬದಿ ನಿಂತಿದ್ದ ಯುವತಿಗೆ ಕಾಮುಕನೊಬ್ಬ ಸೊಂಟ ಮುಟ್ಟಿ ಪರಾರಿಯಾಗಿದ್ದು, ಕೂಡಲೆ ಎಚ್ಚೆತ್ತ ಯುವತಿ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಶುಕ್ರವಾರ ರಾತ್ರಿ ಮನೆಗೆ ತೆರಳುವ ಸಲುವಾಗಿ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ರಸ್ತೆಯಲ್ಲಿ ಯುವತಿ ನಿಂತಿರುವುದನ್ನು ನೋಡಿದ ಕಾಮುಕರು ಬೈಕ್‌ನಲ್ಲಿ ಬಂದು ಯುವತಿಯ ಸೊಂಟ ಮುಟ್ಟಿ ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೆ ತನ್ನ ಗೆಳೆಯನ ಬೈಕ್ ಹತ್ತಿದ ಯುವತಿ ಕಾಮುಕರ ಬೆನ್ನಟ್ಟಿದ್ದು, ಒಬ್ಬ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಯುವತಿ ಹೇಳಿಕೆ ನೀಡಿದ್ದು, ನಾನು ನನ್ನ ಸ್ನೇಹಿತನಿಗಾಗಿ ಕಾಯುತ್ತಿದ್ದೆ. ಆಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಸವಾರರು ಕೆಟ್ಟದಾಗಿ ನನ್ನನ್ನು ಮುಟ್ಟಿದರು. ಇದರಿಂದ ನನಗೆ ಆಘಾತವಾಯಿತು. ಇವರನ್ನು, ಸುಮ್ಮನೆ ಬಿಡಬಾರದು ಎಂದು 10 ನಿಮಿಷ ಅವರ ಬೆನ್ನಟ್ಟಿದೆ. ರಸ್ತೆಯಲ್ಲಿ ಹೋಗುವಾಗಲೇ 100ಕ್ಕೆ ಕರೆ ಮಾಡಿದ್ದೆ. ಹಿಂಬದಿಯಲ್ಲಿ ಕುಳಿತಿದ್ದವನನ್ನು ಹಿಡಿಯಲು ಸಾಧ್ಯವಾಯಿತು, ಮತ್ತೊಬ್ಬ ತಪ್ಪಿಸಿಕೊಂಡ ಎಂದು ಘಟನೆಯನ್ನು ವಿವರಿಸಿದ್ದಾರೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Leave a Reply