ಗ್ರಾಹಕಿಯ ಸೋಗಿನಲ್ಲಿ ಬಂದು ಚಿನ್ನ ಕದ್ದ ಅಪರಿಚಿತೆ : ಚಿನ್ನದ ಕಳ್ಳಿಗಾಗಿ ಪೊಲೀಸರ ಹುಡುಕಾಟ..

ಬೆಂಗಳೂರು: ಅಪರಿಚಿತ ಮಹಿಳೆಯೊಬ್ಬಳು ಗ್ರಾಹಕಿಯ ಸೋಗಿನಲ್ಲಿ ಬಂದು 45ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿರುವ ಘಟನೆ ಏಪ್ರಿಲ್‌ 21ರಂದು ಬೆಂಗಳೂರಿನ ಚಿನ್ನದ ಅಂಗಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ರಾಜಾ ಮಾರ್ಕೆಟ್‌ನ ಸಕಲ ಜ್ಯೂವೆಲರಿ ಹೌಸ್‌ ಎಂಬ ಚಿನ್ನದಂಗಡಿಯಲ್ಲಿ ಅಪರಿಚಿತ ಮಹಿಳೆ ಚಿನ್ನದ ಸರ ಕಳ್ಳತನ ಮಾಡಿದ್ದು,
ಈ ಘಟನೆ ಬೆಳಗ್ಗೆ 11ಗಂಟೆ ಸಮಯದಲ್ಲಿ ನಡೆದಿದೆ. ಈ ಚಿನ್ನದ ಅಂಗಡಿ ಸುಬ್ರಮಣ್ಯಂ ಎಂಬುವರಿಗೆ ಸೇರಿದ್ದು,  ಮಹಿಳೆಯ ಕಳ್ಳತನದ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಈಗ ಚಿಕ್ಕಪೇಟೆ ಪೊಲೀಸ್‌ ಠಾಣೆಯಲ್ಲಿ ಸುಬ್ರಮಣ್ಯಂ ಪ್ರಕರಣ ದಾಖಲು ಮಾಡಿದ್ದು, ಕಳ್ಳತನ ಮಾಡಿದ ಮಹಿಳೆಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.

Comments are closed.