ಕಾಲುಸೂಪು, ಬಿರಿಯಾನಿ ಕೊಡ್ತಾರಂತ ಯಾರ್ಯಾರಿಗೋ ವೋಟ್‌ ಮಾಡ್ಬೇಡಿ : ಜಮೀರ್‌ ಅಹ್ಮದ್‌

ಬೆಂಗಳೂರು : ಕುಮಾರಸ್ವಾಮಿ ಏನೋ ಹುಟ್ಟಿದಾಗಲೇ ಚಡ್ಡಿ ಹಾಕ್ಕೊಂಡು ಹುಟ್ಟಿದ್ರು ಎನಿಸುತ್ತಿದೆ ಎಂದು ನಿನ್ನೆಯಷ್ಟೇ ಕಾಂಗ್ರೆಸ್‌ ಸೇರ್ಪಡೆಗೊಂಡ ಜಮೀರ್‌ ಅಹ್ಮದ್‌ ವ್ಯಂಗ್ಯ ಮಾಡಿದ್ದಾರೆ.

ಮುಸ್ಲಿಂ ಸಮುದಾಯದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗ್ಗೆ ಕಾಲು ಸೂಪ್‌, ಮದ್ಯಾಹ್ನ ಬಿರಿಯಾನಿ, ರಾತ್ರಿ ಬೋಟಿ ಕಲೀಜ ಕೊಡಿಸ್ತಾರೆ ಅಂತ ಯಾರ್ಯಾರಿಗೇ ಮತ ಹಾಕಬೇಡಿ. ಕಾಂಗ್ರೆಸ್‌ಗೆ ಮತ ಹಾಕಿ. ಮುಂದಿನ 5 ವರ್ಷದ ಬಗ್ಗೆ ಯೋಚನೆ ಮಾಡಿ. ಸಿದ್ದರಾಮಯ್ಯ ಸರ್ಕಾರ ಮುಸ್ಲೀಮರಿಗೆ ಒಳ್ಳೆಯದನ್ನೇ ಮಾಡುವುದಾಗಿ ಹೇಳಿದ್ದಾರೆ.

ಈ ಬಾರಿ ಜೆಡಿಎಸ್‌, ಬಿಜೆಪಿ ಎರಡೂ ಅಧಿಕಾರಕ್ಕೆ ಬರುವುದಿಲ್ಲ. ದೇವೇಗೌಡರು ಜಾತ್ಯಾತೀತ. ಅವರನ್ನು ಬೇಕಾದರೆ ನಾನು ಒಪ್ಪಿಕೊಳ್ಳುತ್ತೀನಿ. ಆದರೆ ಕುಮಾರಸ್ವಾಮಿಯವರಲ್ಲಿ ಜಾತ್ಯಾತೀತತೆಯ ಅಂಶ ಒಂದಿಷ್ಟೂ ಇಲ್ಲ. ನೀವು ಜೆಡಿಎಸ್‌ಗೆ ಮತ ಹಾಕಿದ್ರೆ ಅವರು ಖಂಡಿತ ಬಿಜೆಪಿ ಜೊತೆ ಸೇರಿಕೊಳ್ಳುತ್ತಾರೆ. ಆದ್ದರಿಂದ ನೀವು ಕಾಂಗ್ರೆಸ್‌ಗೇ ಮತ ಹಾಕಿ ಎಂದಿದ್ದಾರೆ.

Leave a Reply