72 ಸಾವಿರ ರೂ ಕೊಟ್ಟು ತಮ್ಮ ಬೆಂಜ್‌ ಕಾರಿಗೆ ಫ್ಯಾನ್ಸಿ ನಂಬರ್‌ ಖರೀದಿಸಿದ ಯಶ್‌ !

ಬೆಂಗಳೂರು : ರಾಕಿಂಗ್​ ಸ್ಟಾರ್​ ಯಶ್​ ಹೊಸದಾಗಿ ಖರೀದಿಸಿರುವ ಮರ್ಸಿಡೀಸ್​ ಬೆಂಜ್​ ಕಾರಿಗಾಗಿ 72 ಸಾವಿರ ರೂ. ಕೊಟ್ಟು KA-05-MY 8055 ಫ್ಯಾನ್ಸಿ ನಂಬರ್​ ಪಡೆದುಕೊಂಡಿದ್ದಾರೆ.

ಇಂದು ಶಾಂತಿನಗರದ ಆರ್.ಟಿ.ಒ ಕೇಂದ್ರ ಕಚೇರಿಯಲ್ಲಿ KA 05 MY ಸೀರೀಸ್​ನ ಫ್ಯಾನ್ಸಿ ನಂಬರ್​ಗಳನ್ನು ಹರಾಜು ಹಾಕಲಾಯಿತು. ಹರಾಜು ಪ್ರಕ್ರಿಯೆಯಲ್ಲಿ ಯಶ್​ ಪರವಾಗಿ ರಾಕೇಶ್​ ಎಂಬುವವರು ಪಾಲ್ಗೊಂಡು 72 ಸಾವಿರ ರೂ.ಗೆ ಫ್ಯಾನ್ಸಿ ನಂಬರ್​ ಪಡೆದುಕೊಂಡಿದ್ದಾರೆ. ಹಣ ಎಷ್ಟಾದರೂ ಪರವಾಗಿಲ್ಲ 8055 ನಂಬರ್​ ಪಡೆದುಕೊಳ್ಳುವಂತೆ ಯಶ್ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್​ ಸದಸ್ಯ ನಾರಾಯಣ ರೆಡ್ಡಿ ಪುತ್ರ ಸ್ವರೂಪ್​ ರೆಡ್ಡಿ ತಮ್ಮ ಹೊಸ ಫೋರ್ಡ್​ ಮಸ್ಟಾಂಗ್​ ಕಾರಿಗೆ 3.51 ಲಕ್ಷ ರೂ. ಕೊಟ್ಟು KA05-MY-9999 ಫ್ಯಾನ್ಸಿ ನಂಬರ್​ ಖರೀದಿಸಿದ್ದಾರೆ.

Leave a Reply