ಪಾಟೀಲಣ್ಣ ಬಿಜೆಪಿಗೆ ಸೇರಣ್ಣ : ಕಮಲಕ್ಕೆ ಬರುವಂತೆ ಕೌರವನಿಗೆ BSY ಅಭಿಮಾನಿಗಳಿಂದ ಮನವಿ

ಚಿತ್ರದುರ್ಗ : ಬಿ ಸಿ ಪಾಟೀಲಣ್ಣ ಬಿಜೆಪಿಗೆ ಸೇರಣ್ಣ, ಬಿಎಸ್​ವೈ  ಜೊತೆಗಿರಣ್ಣ ಎಂದು  ಯಡಿಯೂರಪ್ಪನ ಅಭಿಮಾನಿಗಳು ಪಾಟೀಲ್​ ಕಾರನ್ನು ಅಡ್ಡ ಹಾಕಿ ಕೇಳಿಕೊಂಡಿರುವ ಘಟನೆ ಚಿತ್ರದುರ್ಗದ ಹಿರೇಕೆರೂರಿನಲ್ಲಿ ನಡೆದಿದೆ.

ಸಿರಿಗೆರೆ ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ  ತೆರಳುವ ವೇಳೆ ಅವರ ಕಾರನ್ನು ತಡೆದ ಬಿಎಸ್​ವೈ ಅಭಿಮಾನಿಗಳು  ‘ಅಣ್ಣ ಬಿಜೆಪಿ ಸೇರಣ್ಣ. ಯಡಿಯೂರಪ್ಪ ಜೊತೆಗಿರಣ್ಣ ಎಂದು ಹೇಳುತ್ತಾ ‘ಯಡಿಯೂರಪ್ಪಗೆ ಜೈ, ಬಿ.ಸಿ ಪಾಟೀಲ್‍ಗೆ ಜೈ’ ಎಂದು ಘೋಷಣೆ ಕೂಗಿದರು.

ಈ ಘಟನೆಯಿಂದ ಮುಜುಗರಕ್ಕಿಡಾದ ಪಾಟೀಲ್​ ಏನೂ ಮಾತನಾಡದೇ ಕಾರಿನಲ್ಲೇ ಹೊರಟು ಹೋದರು, ಇನ್ನ ಪಾಟೀಲ್​ರನ್ನು ಕಳಿಸಲು ಪೊಲೀಸರು ಹರಸಾಹಸ ಪಟ್ಟು ಕೊನೆಗೆ ಜನರಿಂದ ಕಾರನ್ನು ಬಿಡಿಸಿ ಪಾಟೀಲ್​ರನ್ನು ಕಳುಹಿಸಿದ್ರು.

 

Leave a Reply