ಇಂಗ್ಲೆಂಡ್ ಲಯನ್ಸ್‌ ವಿರುದ್ಧ ಭಾರತ ‘ಎ’ ತಂಡ ಆಯ್ಕೆ ಮಾಡಿದ ಬಿಸಿಸಿಐ

ಪ್ರವಾಸಿ ಇಂಗ್ಲೆಂಡ್ ಲಯನ್ಸ್‌ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರುವ ನಾಲ್ಕುದಿನದ ಮೊದಲ ಪಂದ್ಯಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಭಾರತ ‘ಎ’ ತಂಡವನ್ನು ಪ್ರಕಟಿಸಿದೆ. ಭರವಸೆಯ ಆಟಗಾರ ಅಂಕಿತ್ ಭವಾನೆ ತಂಡವನ್ನು ಮುನ್ನಡೆಸಲಿದ್ದಾರೆ.

ಮಹಿಳೆಯ ವಿರುದ್ಧ ಅಸಭ್ಯ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ರಾಹುಲ್ ಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ರಾಹುಲ್ ಅವರ ಮೇಲೆ ಹೇರಿದ್ದ ಅಮಾನತನ್ನು ಬಿಸಿಸಿಐ ವಿಚಾರಣೆ ಆಗುವುವರೆಗೂ ತೆರವುಗೊಳಿಸಿದೆ. ತಿರುವನಂತಪುರದಲ್ಲಿ ನಡೆದ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ‘ಎ’ ತಂಡ 4-0 ಮುನ್ನಡೆ ಸಾಧಿಸಿದೆ. ಈ ಸರಣಿಯ ಮೂರನೇ ಹಾಗೂ ನಾಲ್ಕನೇ ಪಂದ್ಯದಲ್ಲಿ ರಾಹುಲ್ ಬ್ಯಾಟ್ ಮಾಡಿದ್ದರು.

ಭಾರತ ‘ಎ’ ತಂಡ: ಅಂಕಿತ್ ಭಾವನೆ (ನಾಯಕ), ಕೆ.ಎಲ್ ರಾಹುಲ್, ಈಶ್ವರನ್, ಪ್ರಿಯಾಂಕ್ ಪಾಂಚಾಲ್, ರಿಕ್ಕಿ ಭುಯಿ, ಸಿದ್ಧೇಶ್ ಲಾಡ್, ಕೆ.ಎಸ್‌ ಭರತ್, ಜಲಜ್ ಸಕ್ಸೇನಾ, ಶಹಬಾಜ್ ನದೀಮ್, ಮಯಾಂಕ್ ಮಾರ್ಕಂಡೆ, ನವದೀಪ್ ಸೈನಿ, ಶರ್ದೂಲ್ ಠಾಕೂರ್, ವರುಣ್ ಆರೋನ್.

Leave a Reply