ಸಚಿವ ಡಿ.ಕೆ.ಶಿವಕುಮಾರ್’ ಗೆ ಬಿಗ್ ರಿಲೀಫ್ : 3 ಕೇಸ್ ಗಳು ವಜಾ!

ಸಚಿವ ಡಿ.ಕೆ. ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು ಐಟಿ ಅಧಿಕಾರಿಗಳು ಅವರ ವಿರುದ್ಧ ದಾಖಲಿಸಿದ್ದ ನಾಲ್ಕು ಕೇಸ್ ಗಳು ವಜಾ ಆಗಿವೆ.

ನಾಲ್ಕು ಪ್ರಕರಣಗಳ ವಿಚಾರಣೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದಿತ್ತು. ಇಂದಿಗೆ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಸಾಕ್ಷ್ಯನಾಶ, ಅಸಂಬದ್ಧ ಹೇಳಿಕೆ, ಚೀಟಿ ಹರಿದ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್ ಆರೋಪ ಮುಕ್ತ ಎಂದು ಹೇಳಿದೆ.

ಈ ಮೂರು ಪ್ರಕರಣಗಳಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಆರೋಪ ಮುಕ್ತರಾಗಿದ್ದಾರೆ, ಇನ್ನು ಸಚಿವರ ವಿರುದ್ಧ ಹವಾಲ ದಂಧೆ ಆರೋಪ ಪ್ರಕರಣ ಇದೆ. ಇದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಒಟ್ಟಿನಲ್ಲಿ ಮೂರು ಕೇಸ್ ಗಳಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನಿರಾಳರಾದಂತಾಗಿದೆ.

Leave a Reply