ಪಂಚರಾಜ್ಯ ಚುನಾವಣೆ — ಬಿಜೆಪಿ ವಿಜಯೋತ್ಸವ, ನವ ಭಾರತದ ಉದಯ- ಮೋದಿ..

ಪಂಚರಾಜ್ಯಗಳಲ್ಲಿ ಕುತೂಹಲ ಮೂಡಿಸಿದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಉತ್ತರಕಾಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿ ಭರ್ಜರಿ ಗೆಲುವು ಬಿಜೆಪಿ ಪಾಲಾಗಿದೆ. ಗೋವಾದಲ್ಲಿ ಸ್ಷಷ್ಟ ಬಹುಮತ ಸಾಬೀತಾಗಿಲ್ಲದಿದ್ದರೂ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಮಣಿಪುರದಲ್ಲಿಯೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಲಿದೆ. ಬಿಜೆಪಿಯ ಈ ಐತಿಹಾಸಿಕ ಗೆಲುವನ್ನು ಭರ್ಜರಿಯಾಗಿ ಆಚರಿಸಿತು.

ಉತ್ತರ ಪ್ರದೇಶ ಹಾಗೂ ಉತ್ತರ ಖಾಂಡ್‍ನ ವಿಜಯೋತ್ಸವ ರಾಷ್ಟ್ರ ರಾಜಧಾನಿಯಲ್ಲಿ ನಡೆಯಿತು. ಈ ಪ್ರಯುಕ್ತ ಕೇಂದ್ರ ಕಛೇರಿಯಲ್ಲಿ ನಡೆದ ವಿಜಯಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಗೆಲುವಿಗೆ ಕಾರಣಕರ್ತರಾದವರಿಗೆ ಧನ್ಯವಾದ ಅರ್ಪಿಸಿದರು. ನಂ.ತರ ಇಡೀ ದೇಶವೇ ನಮ್ಮ ಪಕ್ಷವನ್ನು ಒಪ್ಪಿಕೊಂಡಿದೆ. ಇದಕ್ಕೆ ಕಾರಣ ಪ್ರಾಮಾಣಿಕತೆ ಹಾಗೂ ಕಾರ್ಯಕರ್ತರ ತ್ಯಾಗ ಪ್ರತಿ ಚುನಾವಣೆಯಲ್ಲೂ ಗೆಲುವು ನಮ್ಮದಾಗುತ್ತಿದೆ. ನಾವು ನವ ಭಾರತದ ಉದಯ. ದೇಶದಲ್ಲಿನ ಬದಲಾವಣೆಯ ಸಂಕೇತ. ನನ್ನ ಗುರಿ ಬರಿಯ ಗೆಲುವಲ್ಲ. ನಿಮ್ಮೆಲ್ಲರ ಬೇಡಿಕೆ ಈಡೇರಿಸಲು ನನಗೆ ಐದು ವರ್ಷಗಳ ಕಾಲಾವಕಾಶ ನೀಡಿ. 2022ರೊಳಗೆ ಅದನ್ನು ಪೂರ್ಣಗೊಳಿಸುತ್ತೇನೆ  ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ “ಜನರು ಮೋದಿಯವರ ಕೆಲಸ ನೋಡಿ ಮತ ನೀಡಿದ್ದಾರೆ. ಬಡವರ ಪರ ನಿಲುವಿಗೆ ಈ ಗೆಲುವು ಸಂದಿದೆ. ನೋಟ್ ರದ್ದತಿಯನ್ನು ಜನ ಒಪ್ಪಿಕೊಂಡಿರುವುದು ಕೂಡ ಇದಕ್ಕೆ ಕಾರಣ ಕರ್ನಾಟಕ, ಗುಜರಾತ್ ಚುನಾವಣೆಗಳಲ್ಲೂ ಗೆಲುವು ನಮ್ಮದಾಗಲಿದೆ ಎಂದರು.

 

ಗೋವಾದಲ್ಲಿ ನೂತನ ಸರ್ಕಾರ ರಚನೆಗೆ ಸರ್ಕಸ್ ನಡೆದಿದೆ. ಹದಿನೈದು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಗವರ್ನರ್ ಸೂಚಿಸಿದ್ದಾರೆ. ಇಲ್ಲಿ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ. ಬಿಜೆಪಿ 22 ಸದಸ್ಯ ಬಲವನ್ನು ಹೊಂದಿದೆ. ನಾವು ಸ್ಪಷ್ಟ ಬಹುಮತ ಪಡೆಯದಿದ್ದರೂ ಮ್ಯಾಜಿಕ್ ನಂಬರ್ ಪಡೆದಿದ್ದೇವೆ ಎಂದು ಪರಿಕ್ಕರ್ ತಿಳಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಪರಿಕ್ಕರ್ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮಣಿಪುರದಲ್ಲಿ ಬಹುಮತ ಸಾಬೀತಾಗಿಲ್ಲವಾದ ಕಾರಣ ಗವರ್ನರ್ ಆಡಳಿತ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಆದರೆ ಎನ್‍ಪಿಪಿ, ಎಲ್‍ಜೆಪಿ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತೇವೆ ಎಂದು ಬಿಜೆಪಿ ತಿಳಿಸಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್ ತನ್ನ ಗೆಲುವನ್ನು ಆಚರಿಸಿದೆ.

Comments are closed.