ಸಚಿವ ಸ್ಥಾನಕ್ಕೆ ಬಿಜೆಪಿಯಿಂದ ನನಗೆ 30 ಕೋಟಿ ಆಫರ್​ ಬಂದಿತ್ತು : ಲಕ್ಷ್ಮೀ ಹೆಬ್ಬಾಳ್ಕರ್​ ಹೊಸ ಬಾಂಬ್​

ಬೆಳಗಾವಿ  : ಕಾಂಗ್ರೆಸ್ ಬಿಟ್ಟು ಬಂದರೆ ನಿಮಗೆ ಸಚಿವ ಸ್ಥಾನ  ಹಾಗೂ 30 ಕೋಟಿ  ನೀಡುತ್ತೇವೆ ಬಿಜೆಪಿ ಮುಖಂಡರಿಂದ ನನಗೆ ಕರೆಬಂದಿತ್ತು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್​ ಹೊಸ ಬಾಂಬ್​ ಅನ್ನು ಸಿಡಿಸಿದ್ದಾರೆ.

 

ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಒಂದಲ್ಲಾ ಒಂದು ಸುದ್ದಿಯಲ್ಲಿದ್ದರು, ಇಷ್ಟು ದಿನ ಅವರ ಹಾಗೂ ಸತೀಶ ಜಾರಕಿಹೊಳಿ ನಡುವಿನ ನಗಳ ಮುನಿಸು ಭಿನ್ನಾಭಿಪ್ರಾಯ ವಿತ್ತು, ಆದರೆ ಇದೀಗ ನನಗೆ ಸಚಿವ ಸ್ಥಾನ ಕೊಡುತ್ತೇನೆ ನಮ್ಮ ಕಡೆ ಬನ್ನಿ ಎಂದು 30 ಕೋಟಿ ಬಿಜೆಪಿಯವರು ಆಮಿಷವೊಡ್ಡಿದ್ದಾರೆ.

 

ನಾನು ಹೈದಾರಬಾದ್​ನಲ್ಲಿ ಇದ್ದಾಗ  ನನಗೆ ಮೆಸೇಜ್​ ಬಂದಿತ್ತು ಇದನ್ನು ನಾನು ಪರಮೇಶ್ವರ್​ ಅವರಿಗೂ ತಿಳಿಸಿದ್ದೇನೆ, ನಿಮಗೆ 30 ಕೋಟಿ ಕೋಡುತ್ತೇನೆ, ಜೊತೆಗೆ ಮಂತ್ರಿ ಪದವಿ ಕೂಡ ಕೋಡುತ್ತೇನೆ ಎಂದು ಆಮೀಷವೊಡ್ಡಿದ್ದರು,  ಇನ್ನ ಕರೆ ಮಾಡಿದವರ ಬಗ್ಗೆ ನಮ್ಮ ವರಿಷ್ಟರ ಅತ್ತಿರ ಹೇಳಿದ್ದೇನೆ, ಇಲ್ಲಿ ಹೇಳವು ಹಾಗುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್​ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

Leave a Reply

Your email address will not be published.