ಕಾಂಗ್ರೆಸ್ ಮುಕ್ತ ಭಾರತದ ಕನಸು ಕಂಡಿದ್ದ ಬಿಜೆಪಿ, ಪ್ರಿಯಾಂಕಾ ಗಾಂಧಿಯ ಗುಣಗಾನ..

ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಪ್ರವೇಶ ಎದುರಾಳಿಗಳಿಂದಲೂ ಮನ್ನಣೆ ಪಡೆಯುತ್ತಿದೆ. ಅದರಲ್ಲಿಯೂ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಂಡಿದ್ದ ಬಿಜೆಪಿಯವರೇ ಪ್ರಿಯಾಂಕಾ ಗಾಂದಿ ಅವರ ಗುಣಗಾನ ಮಾಡಲು ಮುಂದಾಗಿರುವುದು ಪಕ್ಷದ ಮುಖಂಡರ ನಿದ್ದೆ ಕೆಡಿಸಿದೆ.

ಹರ್‍ಯಾಣದ ಕರ್ನಾಲ್‌ ಕ್ಷೇತ್ರದ ಬಿಜೆಪಿ ಸಂಸದ ಅಶ್ವಿನಿ ಕುಮಾರ್‍ ಛೋಪ್ರಾ ಕಾಂಗ್ರೆಸ್‌ನ ಬ್ರಹ್ಮಾಸ್ತ್ರದ (ಪ್ರಿಯಾಂಕಾ) ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸದಿಲ್ಲಿಯಿಂದ ಪ್ರಕಟವಾಗುವ ಪಂಜಾಬ್ ಕೇಸರಿ ಪತ್ರಿಕೆಯ ಸಂಪಾದಕರೂ ಆಗಿರುವ ಅಶ್ವಿನಿ ಕುಮಾರ್‍ ಪ್ರಯಾಂಕಾ ಆಗಮನವನ್ನು ಮುಕ್ತಕಂಠದಿಂದ ಸ್ವಾಗತಿಸುವ ಮುಖಪುಟ ಸಂಪಾದಕೀಯ ಪ್ರಕಟಿಸುವ ಮೂಲಕ ಬಿಜೆಪಿ ಹೈಕಮಾಂಡ್‌ನ ಕಣ್ಣು ಕೆಂಪಾಗಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪರಂಪರೆಯ ಮುಂದುವರಿಕೆಯ ಪ್ರತೀಕವಾಗಿದ್ದಾರೆ. ದೇಶದ, ಅದರಲ್ಲಿಯೂ ಮುಖ್ಯವಾಗಿ ಉತ್ತರಪ್ರದೇಶದ ಜನರು ಪ್ರಿಯಾಂಕಾ ಅವರ ಆಗಮನ ಎದಿರುನೋಡುತ್ತಿದ್ದರು. ಆ ಕನಸು ಇದೀಗ ನನಸಾಗಿದೆ ಎಂದು ಅಶ್ವಿನಿ ಬರೆದಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರ ಪ್ರವೇಶದಿಂದ ಉತ್ತರ ಪ್ರದೇಶ ಹಾಗೂ ದೇಶದ ಇತರೆಡೆ ಕಾಂಗ್ರೆಸ್ ಪಕ್ಷದ ಅದೃಷ್ಟ ಬದಲಾಗಲಿದೆ ಎಂದಿರುವ ಅವರು ಆ ಕುರಿತು ಎರಡು ಪುಟಗಳ ವಿಸ್ತೃತ ವರದಿಗಳನ್ನು ಪ್ರಕಟಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಲ್‌ನಿಂದ ಬಿಜೆಪಿ ಟಿಕೆಟ್‌ ಮೇಲೆ ಸ್ಪರ್ಧಿಸಿ ಜಯಶಾಲಿಯಾಗಿದ್ದ ಅಶ್ವಿನಿ ಮುಂದಿ ಚುನಾವಣೆಯಲ್ಲಿ ಸ್ಪಧೇ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

ಇಷ್ಟಲ್ಲದೇ ಅಶ್ವಿನಿ ಕುಮಾರ್‍ ಅವರು ಹರ್‍ಯಾಣ ಬಿಜೆಪಿ ಘಟಕ ಹಾಗೂ ಮುಖ್ಯಮಂತ್ರಿ ಕಟ್ಟರ್‍ ಅವರ ಕಟ್ಟರ್‍ ವಿರೋಧಿಯಾಗಿದ್ದರು ಎಂಬುದು ಗಮನಾರ್ಹ ಸಂಗತಿ.

Leave a Reply