ಬಾಲಿವುಡ್ ನಟ ಶಾರೂಖ್ ಖಾನ್ `ಬೋಟಿಂಗ್’, `ವೋಟಿಂಗ್’ ವ್ಯತ್ಯಾಸ ತಿಳಿಸಿದ್ದು ಯಾರಿಗೆ..?

ಮತದಾನದ ವೇಳೆ ಬಾಲಿವುಡ್ ಕಿಂಗ್ ಖಾನ್ ತಮ್ಮ ಮಗನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು. ಇದೀಗ ಸ್ವತಃ ಶಾರೂಕ್ ಅವರೇ ಮಗನನ್ನು ಕರೆದೊಯ್ದ ಸತ್ಯ ಬಿಚ್ಚಿಟ್ಟಿದ್ದಾರೆ.

ಹೌದು. ಸೋಮವಾರ ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ನಡೆದಿತ್ತು. ಈ ವೇಳೆ ಸೆಲೆಬ್ರಿಟಿಗಳೆಲ್ಲರೂ ಸದೃಢ ಭಾರತಕ್ಕಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಸಾಮಾನ್ಯವಾಗಿ ಮತಗಟ್ಟೆಯೊಳಗೆ ಮಕ್ಕಳನ್ನು ಬಿಡುವುದಿಲ್ಲ. ಆದರೆ ಶಾರೂಕ್ ತಮ್ಮ ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು.

ಪತ್ನಿ ಗೌರಿಯವರು ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತದಾನ ಕೇಂದ್ರದೊಳಗೆ ಕರೆದುಕೊಂಡು ಹೋಗಿದ್ದಾರೆ. ಯಾಕಂದ್ರೆ ಅವನಿಗೆ `ಬೋಟಿಂಗ್’ ಹಾಗೂ `ವೋಟಿಂಗ್’ ಬಗ್ಗೆ ಭಾರೀ ಗೊಂದಲವಿತ್ತು. ಈ ಗೊಂದಲವನ್ನು ಕ್ಲೀಯರ್ ಮಾಡಲು ಆತನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಶಾರೂಕ್, ಪುಟ್ಟ ಮಗನಿಗೆ ಬೋಟಿಂಗ್ ಮತ್ತು ವೋಟಿಂಗ್ ಮಧ್ಯೆ ಸಾಕಷ್ಟು ಕನ್‍ಫ್ಯೂಶನ್ ಇತ್ತು. ಈ ಗೊಂದಲವನ್ನು ನಿವಾರಿಸಲು ಆತನನ್ನು ಕೂಡ ಮತಗಟ್ಟೆಯೊಳಗೆ ಕರೆದುಕೊಂಡು ಹೋಗುವ ಮೂಲಕ ಮತದಾನದ ಬಗ್ಗೆ ಮತದಾನದ ಬಗ್ಗೆ ವಿವರಿಸಲಾಯಿತು ಎಂದು ಮೂವರ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

ಬಾಕ್ಸ್ ಆಫೀಸಿನಲ್ಲಿ ಝೀರೋ ಚಿತ್ರ ಪ್ಲಾಪ್ ಆಗಿದ್ದು, ಆ ಬಳಿಕ ಶಾರೂಕ್ ಅವರು ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಅಲ್ಲದೆ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ತಿಳಿಸಲಿದ್ದಾರೆ.

Leave a Reply