ಸೋಲುಂಡ ಟೀಮ್‌ ಇಂಡಿಯಾಕ್ಕೆ ಸ್ಫೂರ್ತಿ ತುಂಬಿದೆ ಬಾಲಿವುಡ್‌ ತಾರೆಯರು!

ಟಿ 20 ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲು 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಮಹಿಳಾ ಕ್ರಿಟೆಕ್‌ ಆಟಗಾರ್ತಿಯರು ಸೋಲನುಭವಿಸಿದ್ದಾರೆ. ಮಾರ್ಚ್‌ 08 ರಂದು ನಡೆದ ಮಹಿಳಾ ಟಿ-20 ವಿಶ್ವಕಪ್‌ ಪಂದ್ಯಾವಳಿಯ ಪೈನಲ್‌ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಗುಲುವಿಗಾಗಿ ಸೆಣೆಸಾಡಿದ್ದವು. 185 ರನ್‌ಗಳನ್ನು ಕಲೆಹಾಕದ್ದ ಆಸ್ಪ್ರೇಲಿಯಾ ತಂಡ ಭಾರತ ಗರಿಷ್ಟ ಮಟ್ಟದ ಟಾರ್ಗೆಟ್ರ್ ನೀಡಿತ್ತು. ಭಾರತವು ಆರಂಭದ ಪವರ್‌ ಪ್ಲೇ ಓವರ್‌ಗಳಲ್ಲಿ 30-4 ರನ್‌ಗಳನ್ನು ಗಳಿಸಿತ್ತು.

ಆರಂಭದಲ್ಲಾದ ಹಿನ್ನಡೆಯಿಂದ ಭಾರತ ತಂಡ 185 ರನ್‌ಗಳನ್ನು ರೀಚ್‌ ಮಾಡುವುದರಲ್ಲಿ ವಿಫಲವಾಯಿತು. ಗೆಲುವಿನ ನಗೆ ಬೀರಲು ಸಿದ್ದವಾಗಿದ್ದತಂಡ ಸೋಲನುಭವಿಸಿತು. ಸೋಲನ್ನು ಈಸಿಯಾಗಿ ಸ್ವೀಕರಿಲಾಗದ ತಂಡದ ಕಿರಿಯ ಆಟಗಾರ್ತಿ 16 ವರ್ಷದ ಶಫಾಲಿ ವರ್ಮಾ ಕ್ರೀಡಾಂಗಣದಲ್ಲಿಯೇ ಕಣ್ಣೀರು ಹಾಕಿದ್ದರು.

ಆಟಗಾರ್ತಿಯರ ಛಲವನ್ನು ಅಭಿನಂದಿಸಿರುವ ಬಾಲಿವುಡ್‌ನ ಅತಿಯಾ ಶೆಟ್ಟಿ, ರಣವೀರ್ ಸಿಂಗ್, ತಾಪ್ಸಿ ಪನ್ನು ಮತ್ತು ಅಭಿಷೇಕ್ ಬಚ್ಚನ್ ತಮ್ಮ ಟ್ವಿಟರ್‌ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿದ್ದಾರೆ. ನೀವು ಕೆಲವನ್ನು ಗೆಲ್ಲುತ್ತೀರಿ, ನೀವು ಕೆಲವನ್ನು ಕಲಿಯುತ್ತೀರಿ! ನೀವು ಅದ್ಭುತ ಪ್ರತಿಭೆಗಳು ಮತ್ತು ಆಟಗಾರರು, ನಮ್ಮನ್ನು ಇಲ್ಲಿಯವರೆಗೆ ಪ್ರತಿನಿಧಿಸಿದ್ದಕ್ಕಾಗಿ ಮತ್ತು ಕರೆದೊಯ್ಯಿದ್ದಕ್ಕಾಗಿ ಧನ್ಯವಾದಗಳು. ಟೀಮ್ ಇಂಡಿಯಾ, ಯಾವಾಗಲೂ! ಎಂದೂ..
ಇದು ನಮ್ಮ ಒಳ್ಳೆಯ ದಿನವಲ್ಲ … ಆದರೆ ನಾವು ಮುಂದೆ ಸಾಗುವುದನ್ನು ಕಲಿಯುತ್ತೇವೆ… ನಮ್ಮ ಆಟದಲ್ಲಿ ಅತ್ಯುತ್ತಮವಾದದ್ದು ಇನ್ನೂ ಬರಬೇಕಿದೆ. # T20WorldCup2020 #INDvAUS 5 ನೇ ಬಾರಿಗೆ ಆಸೀಸ್ ಗೆ ಅಭಿನಂದನೆಗಳು !!! ಎಂದೂ ಟ್ವೀಟಿಸಿದ್ದಾರೆ.

85 ರನ್‌ಗಳ ಗೆಲುವಿನೊಂದಿಗೆ, ಆಸ್ಟ್ರೇಲಿಯಾ ವುಮೆನ್ ತಂಡ 2018 ಟಿ-20 ವಿಶ್ವಕಪ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದು ಆಸಿಸ್‌ ಗೆದ್ದುಕೊಂಡಿರುವ 5ನೇ ಟ್ರೋಫಿಯಾಗಿದೆ.