ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಬಾಸ್ಕೆಟ್ಬಾಲ್‌ನ ಮಹಾನ್ ತಾರೆ ಬ್ರಯಾಂಟ್

ಬಾಸ್ಕೆಟ್ಬಾಲಿನ ಮಹಾನ್ ಆಟಗಾರ ಕೋಬೆ ಬ್ರಯಾಂಟ್ ಹೆಲಿಕಾಪ್ಟರ್‍ ದುರಂತದಲ್ಲಿ ದಾರುಣ ಸಾವಿಗೀಡಾಗಿದ್ದಾರೆ. ಇನ್ನೂ 41ರ ವಯಸ್ಸಿನ ಲಾಸ್‌ ಏಂಜಲಿಸ್ ಸ್ಟ್ರೈಕರ್ಸ್‌ ತಂಡದ ಮಿನುಗುತಾರೆ ಬ್ರಯಾಂಟ್ ಈಗ ಕೇವಲ ನೆನಪಾಗಿ ಉಳಿದಿದ್ದಾರೆ.

1996ರಿಂದ 2016ರ ಅವಧಿಯಲ್ಲಿ ಐದು ಬಾರಿ ಪ್ರತಿಷ್ಠಿತ ಎನ್‌ಬಿಎ ಚಾಂಪಿಯನ್ ಆಗಿದ್ದ ಬ್ರಯಾಂಟ್ ಅವರು ಪತ್ನಿ ವೆನೀಸಾ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಲಾಸ್ ಏಂಜಲಿಸ್‌ನ ಕಲಬಾಸ್ ಸಮೀಪ ಸಮಬವಿಸಿದ ಹೆಲಿಕಾಪ್ಟರ್‍ ಅಪಘಾತದಲ್ಲಿ ಕೋಬೆ ಬ್ರಯಾಂಟ್ ನಿಧನರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತದಲ್ಲಿ ಕೋಬೆ ಬ್ರಯಾಂಟ್ ಅವರೊಂದಿಗೆ ಹೆಲಿಕಾಪ್ಟರಿನಲ್ಲಿದ್ದ ಇತರ ಐವರು ಸಹ ದುರ್ಮರಣಕ್ಕೆ ಈಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ದುರ್ಘಟನೆಯಲ್ಲಿ ಸಿಕೋರ್ಸ್ಕಿ ಎಸ್- 76 ಹೆಲಿಕಾಪ್ಟರಿನಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬಾಸ್ಕೆಟ್ಬಾಲ್ ಅಂಗಳದಲ್ಲಿ ಜೊತೆಗಾರ ಲಿಬ್ರಾನ್ ಜೇಮ್ಸ್ ತಮ್ಮ ಸಾರ್ವಕಾಲಿಕ ಗಳಿಕೆಯ ದಾಖಲೆ ಮುರಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿರುವುದು ಕ್ರೀಡಾ ಪ್ರೇಮಿಗಳನ್ನು ದಂಗುಬಡಿಸಿದೆ. ತಮ್ಮ ಇಪ್ಪತ್ತು ವರ್ಷಗಳ ಕ್ರೀಡಾ ವೃತ್ತಿಯಲ್ಲಿ ಬ್ರಯಾಂಟ್ ಎರಡು ಬಾರಿ ಅಮೆರಿಕದ ಪರವಾಗಿ ಒಲಿಂಪಿಕ್ ಚಿನ್ನ ಗೆದ್ದಿದ್ದರು.