BSY Cabinet : ಆಕಾಂಕ್ಷಿಗಳಿಗೆ ಅಮಿತ್ ಶಾ ತಣ್ಣೀರು-ದಿಲ್ಲಿಗೆ ಬನ್ನಿ ಎಂದ ಶಾ..

ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯ ಭೇಟಿ ಸಂದರ್ಭದಲ್ಲಿ ಬಿಎಸ್ವೈ ಸಂಪುಟಕ್ಕೆ ತಮ್ಮ ಸೇರ್ಪಡೆಗೆ ಹಸಿರು ನಿಶಾನೆ ದೊರಕಬಹುದು ಎಂದು ಕಾದು ಕುಳಿತಿದ್ದ ಸಚಿವಾಕಾಂಕ್ಷಿಗಳಿಗೆ ಭಾರೀ ನಿರಾಸೆಯಾಗಿದೆ.

ಕೂಡಲೇ ಸಂಪುಟ ವಿಸ್ತರಣೆಗೆ ಅವಸರ ಇಲ್ಲ. ವಿದೇಶ ಪ್ರವಾಸ ಮುಗಿಸಿ ನಿಧಾನವಾಗಿ ದಿಲ್ಲಿಗೆ ಬನ್ನಿ ಮಾತಾಡೋಣ ಎಂದು ಅಮಿತ್ ಶಾ ಅವರು ಬಿಎಸ್ವೈಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಇದು ಆಕಾಂಕ್ಷಿಗಳಿಗೆ ಭಾರೀ ನಿರಾಸೆಗೆ ಕಾರಣವಾಗಿದೆ.

ಯಡಿಯೂರಪ್ಪಅವರೇನೋ ಮಾಸಾಂತ್ಯಕ್ಕೆ ವಿದೇಶ ಪ್ರವಾಸದೀಂದ ಹಿಂದಿರಗುತ್ತಾರೆ. ಆದರೆ ಆ ವೇಳೆಗೆ ದಿಲ್ಲಿ ಚುನಾವಣಾ ಪ್ರಚಾರ ಜೋರು ಪಡೆದಿರುತ್ತೆ. ಹಾಗಾಗಿ ಫೆ.11ರ ನಂತರವಷ್ಟೇ ಬಿಎಸ್ವೈಗೆ ಶಾ ಭೇಟಿ ಸಾಧ್ಯ ಎಂಬ ವಾಸ್ತವ ಆಕಾಂಕ್ಷಿಗಳಿಗೆ ಅರಿವಾಗಿದೆ.

ಈ ಮಧ್ಯೆ ಹುಬ್ಬಳ್ಳಿ ಭೇಟಿ ವೇಳೆ ಅಮಿತ್ ಶಾ ಅವರು ಪಕ್ಷಾಂತರಿಗಳ ನಾಯಕ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲೂ ನಿರಾಕರಿಸಿರುವುದು ಉರಿಯುತ್ತಿರುವ ಗಾಯಕ್ಕೆ ಸುಣ್ಣ ಬಳಿದಂತಾಗಿದೆ.

ಒಟ್ಟಿನಲ್ಲಿ ಹೇಳಬೇಖೆಂದರೆ ಅಮಿತ್ ಶಾ ರಾಜ್ಯ ಭೇಟಿಯಿಂದ ಯಡಿಯೂರಪ್ಪ ಅವರಿಗಾಗಲೀ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ನಾಯಕರಿಗಾಗಲೀ ಯಾವ ಪ್ರಯೋಜನವನ್ನೂ ನೀಡಿಲ್ಲ ಎಂದು ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ.