ಪಕ್ಷಾಂತರಿಗಳ ಒತ್ತಡಕ್ಕೆ ಮಣಿದ CM – 1 ದಿನದಲ್ಲಿ ಮೂವರಿಗೆ ಖಾತೆ ಮರು ಹಂಚಿಕೆ….

ಅಳೆದೂ ತೂಗಿ ಖಾತೆ ಹಂಚಿಕೆ ಮಾಡಿದ್ದ ಸಿಎಂ ಯಡಿಯೂರಪ್ಪ ನೂತನ ಸಚಿವರ ಒತ್ತಡಕ್ಕೆ ಮಣಿದು ಒಂದೇ ದಿನದಲ್ಲಿ ಖಾತೆಗಳನ್ನು ಮರು ಹಮಚಿಕೆ ಮಾಡಿದ್ದಾರೆ. ಕಳೆ ದಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದ 10 ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿತ್ತು.


ಖಾತೆ ಹಂಚಿಕೆಯಿಂದ ಹಲವರು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಮಂಗಳವಾರ ಖಾತೆಗಳ ಮರು ಹಂಚಿಕೆ ಮಾಡಲಾಗಿದೆ. ಅರಣ್ಯಕ್ಕೆ ಕಾಲಿಡೆ ಎಂದಿದ್ದ ಬಿಸಿ ಪಾಟೀಲರಿಗೆ ಬಸವರಾಜ ಬೊಮ್ಮಾಯಿ ಬಳಿ ಇದ್ದ ಕೃಷ್‌ಇ ಖಾತೆಯನ್ನು ನೀಡಲಾಗಿದೆ.

ಇದೇ ರೀತಿ ಆಹಾರ ಒಲ್ಲೆ ಎಂದು ಪಟ್ಟು ಹಿಡಿದ ಆನಂದ್ ಸಿಂಗ್ ಅವರಿಗೆ ಅರಣ್ಯ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಜೊತೆಗೆ ಆಹಾರ ಖಾತೆಯನ್ನೂ ಉಣಬಡಿಸಲಾಗಿದೆ.

ಇನ್ನೂ ಕಾರ್ಮಿಕರ ಒಡನಾಟ ಸಾಲದು ಎಂದು ರಚ್ಚೆ ಹಿಡಿದಿದ್ದ ಯಲ್ಲಾಪುರದ ಶಿವರಾಮ ಹೆಬ್ಬಾರರಿಗೆ ಹೆಚ್ಚುವರಿಯಾಗಿ ಸಕ್ಕರೆ ಖಾತೆ ನೀಡಿ ಬಾಯಿ ಸಿಹಿ ಮಾಡುವ ಕೆಲಸವನ್ನು ಮುಖ್ಯಮಂತ್ರಿಳು ಮಾಡಿದ್ದಾರೆ. ಈ ಮಧ್ಯೆ ಮಂತ್ರಿಗಿರಿ ಬದಲು ಎಂಎಸ್‌ಐಎಲ್ ಅಧ್ಯಕ್ಷತೆ ನೀಡಿದ್ದಕ್ಕೆ ಮುನಿಸಿಕೊಂಡಿರುವ ಮಹೇಶ್ ಕುಮಟಳ್ಳಿ ಅವರನ್ನು ಸಿಎಂ ಹೇಗೆ ಸಮಾಧಾನಿಸುತ್ತಾರೋ ಕಾದು ನೋಡಬೇಕಿದೆ.