ಅಕ್ಟೋಬರ್ನಲ್ಲಿ ಸಮ್ಮಿಶ್ರ ಸರ್ಕಾರ ಉರುಳುತ್ತಾ? : BSY ಜಾತಕದಲ್ಲಿದೆಯಂತೆ ಮಹಾಯೋಗ : ರಂಭಾಪುರಿ ಶ್ರೀ ಹೇಳಿದ್ದೇನು..?

ತುಮಕೂರು : ಮೇ 17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ವಿಫಲರಾಗಿ ಎರಡೇ ದಿನಕ್ಕೆ ರಾಜೀನಾಮೆ ನೀಡಿದ್ದರು. ನಂತದ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಅಕ್ಟೋಬರ್ ಎರಡನೇ ವಾರದಲ್ಲಿ ಸಮ್ಮಿಶ್ರ ಸರ್ಕಾರ ಉರುಳುತ್ತಾ….? ಮತ್ತೇ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ..? ಹೌದು ಯಡಿಯೂರಪ್ಪ ನವರ ಜಾತಕ ಕುಂಡಲಿಯಲ್ಲಿ ಈ ಮಹಾಯೋಗ ಇದೆಯಂತೆ. ಹಾಗೆಂದು ರಂಭಾಪುರಿ ಶ್ರೀಗಳು‌ ಭವಿಷ್ಯ ನುಡಿದಿದ್ದಾರೆ.

‘ ಅಕ್ಟೋಬರ್ ಎರಡನೇ ವಾರದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ. ಅವರ ಕುಂಡಳಿ ಪ್ರಕಾರ ಅವರಿಗೆ ಯೋಗ ಇದೆ. ಅಕ್ಟೋಬರ್ ಎರಡನೇ ವಾರದ ಅಪೂರ್ವ ಘಟ್ಟದಲ್ಲಿ ಮತ್ತೋರ್ವ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ‌ಯೋಗ ಇದೆ. ಖಂಡಿತವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗ್ತಾರೆ. ಯಡಿಯೂರಪ್ಪರ ದಿಟ್ಟತನ ಎಲ್ಲರಿಗೆ ಮಾದರಿ. ಕಷ್ಟ ಸಹಿಸಿಕೊಂಡು ಅವರು ಮುಂದೆ ಹೋಗುತ್ತಿದ್ದಾರೆ. ಹಾಗಾಗಿ ಅವರಿಗೆ ಮುಂದೆ ಯೋಗ ಕಾದಿದೆ ‘  ಎಂದು ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀ ಹೇಳಿಕೆ ನೀಡಿದ್ದಾರೆ..

Leave a Reply