BSY ಬಿಟ್ಟು ಇನ್ಯಾವ ಬೋಳಪ್ಪ ಬಂದರೂ CM ಆಗಲು ಬಿಡಲ್ಲ : ರಮೇಶ್‌ ಜಿಗಜಿಣಗಿ

ವಿಜಯಪುರ : ರಾಜ್ಯದಲ್ಲಿ ದಲಿತ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು. ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ ಎಸ್ ಯಡಿಯೂರಪ್ಪ ಸಿಎಂ ಆಗುತ್ತಾರೆ. ಇವರನ್ನು ಬಿಟ್ಟು ಯಾವ ಬೋಳಪ್ಪ ಬಂದರೂ ಸಿಎಂ ಆಗೋದಕ್ಕೆ ಬಿಡೋದಿಲ್ಲ ಎಂದು ಕೇಂದ್ರ ನೈರ್ಮಲ್ಯ ಸಚಿವ ರಮೇಶ್‌ ಜಿಗಜಿಣಗಿ ಹೇಳಿದ್ದಾರೆ.

ಅಣ್ಣ ಯಡಿಯೂರಪ್ಪನವರ ನಂತರ ಯಾರಾದರೂ ಸಿಎಂ ಆಗಲಿ.ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು. ಆದರೆ ಬಾಬಾಸಾಹೇಬ್ ಅಂಬೇಡಕರ್‌ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌ನ ಖರ್ಗೆಯನ್ನು ಮಾತ್ರ ಸಿಎಂ ಆಗಲು ಬಿಡುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್‌ನಲ್ಲಿರುವ ದಲಿತರು ಪಾಪಿಷ್ಠರು.ದಲಿತರು ಪಾಪಿಷ್ಠರಾಗಿದ್ದಾರೆಂದರೆ ಅದು ಕಾಂಗ್ರೆಸ್ ನಲ್ಲಿರುವವರು ಮಾತ್ರ. ಕಾಂಗ್ರೆಸ್ ಅಂಬೇಡ್ಕರ್‌ ಅವರಿಗೆ ಅನ್ಯಾಯ ಮಾಡಿದೆ. ಬಿಜೆಪಿಯಲ್ಲಿರುವ ದಲಿತರ್ಯಾರು ಪಾಪಿಷ್ಠರಲ್ಲ ಎಂದಿದ್ದಾರೆ.

Leave a Reply