ಕೊನೆಗೂ ಫಿಕ್ಸ್ ಆಯ್ತು 200ರೂ.ಗೊಂದು ಟಿಕೇಟ್: ಇಂದಿನಿಂದಲೇ ಜಾರಿ

ಸಿ.ಎಂ ಸಿದ್ದರಾಮಯ್ಯ ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲಿ ಏಕ ದರ ನೀತಿಯನ್ನ ಜಾರಿಗೆ ತರುವ ಬಗ್ಗೆ ಬಜೆಟ್ ನಲ್ಲಿ ಮಂಡಿಸಿದ್ರು. ಆದ್ರೆ ಅದು ಅನುಷ್ಟಾನಕ್ಕೆ ತರಲು ತಡವಾಗಿದ್ದರಿಂದ ಒಂಡಿಷ್ಟು ಟೀಕೆಗೂ ಗುರಿಯಾಗಿದ್ರು. ಅಲ್ಲದೆ ಕುಟುಂಬ ಸಮೇತ 1050ರೂ.ಗೊಂದು ಟಿಕೇಟ್ ಖರೀದಿಸಿ ಬಾಹುಬಲಿ-2 ಚಿತ್ರ ವೀಕ್ಷಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅದರ  ಎಫೆಕ್ಟ್ ಗೆ ಕೊನೆಗೂ ಸಿ.ಎಂ ಟಿಕೇಟ್ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದ್ದಾರೆ.

ಇಂದಿನಿಂದ್ಲೇ ಮಲ್ಟಿಪೆಕ್ಸ್ ಹಾಗು ಏಕತೆರೆ ಸಿನಿಮಾ ಮಂದಿರಗಳಲ್ಲಿ ಪ್ರತಿ ಟಿಕೇಟಿನ ಗರಿಷ್ಠ ದರ 200ರೂ. ಎಂದು ಆದೇಶ ಹೊರಡಿಸಲಾಗಿದೆ. ಆದ್ರೆ ಇದ್ರೊಂದಿಗೆ ಕೆಲವು ಶರತ್ತುಗಳನ್ನೂ ಸಹ ಸೂಚಿಸಲಾಗಿದೆ. ಈ ಗರಿಷ್ಠ ದರ ಕೇವಲ ಕನ್ನಡಕ್ಕಷ್ಟೇ ಅಲ್ಲದೆ, ಇಲ್ಲಿ ತೆರೆಕಾಣುವ  ಎಲ್ಲಾ ಭಾಷೆಗಳಿಗೂ ಅನ್ವಯವಾಗಲಿದೆ.

ಅಲ್ಲದೆ ಗೋಲ್ಡ್ ಕ್ಲಾಸ್ ಹಾಗು ಐಮ್ಯಾಕ್ಸ್ ನಲ್ಲಿ ಪ್ರದರ್ಶನಗೊಳ್ಳುವ ಟಿಕೇಟ್ ಗಳ ಮೇಲೂ ಶೇ.10ರಷ್ಟು ವಿನಾಯ್ತಿ ಕೊಡಲಾಗಿದೆ. ಹೀಗಾಗಿ  ಇದರ ಸಾಧಕ ಭಾದಕಗಳ ಸರಿಯಾಗಿ ಅರಿವಿಗೆ ಬಾರದೆ ಇರೋದ್ರಿಂದ, ಸದ್ಯಕ್ಕಂತೂ ಸಿನಿಮಾರಸಿಕರು ಫುಲ್ ಖುಷ್ ಆಗಿರೋದಂತೂ ನಿಜ.

 

Comments are closed.