ಸಚಿವ ಸಂಪುಟ ವಿಳಂಬ ವಿಚಾರ : ಮುಂಬೈಗೆ ತೆರಳುತ್ತಾರಾ ಕಾಂಗ್ರೆಸ್ ಅತೃಪ್ತ ಶಾಸಕರು ..?

ಸಚಿವ ಸಂಪುಟ ವಿಳಂಬ ವಿಚಾರ ಕುರಿತು ಅಸಮಧಾನಗೊಂಡ ಕಾಂಗ್ರೆಸ್ ಅತೃಪ್ತ ಶಾಸಕರು ಮುಂಬೈಗೆ ಹೋಗುತ್ತಿದ್ದಾರೆ ಎನ್ನುವ ಮಾತು ಮಾದ್ಯಮಗಳಲ್ಲಿ ಹರಿದಾಡುತ್ತಿರುವ ವಿಚಾರ ಸುಳ್ಳು ಎಂದು ಶಾಸಕ ಬಿಸಿ ಪಾಟೀಲ್ ತಿಳಿಸಿದ್ದಾರೆ. ನಾನು ಪಕ್ಷ ಬಿಡಲ್ಲ ಎಂದು  ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ. ಯಾರೋ ಒಬ್ಬ ಶಾಸಕರು ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಶಾಸಕರೂ ಮುಂಬೈಗೆ ಹೋದರೂ ಏನು ಆಗೋದಿಲ್ಲ. ಇಲ್ಲಿ ಒತ್ತಾಯ ಮಾಡಿದರೆ ಬೇಗ ಆಗಬಹುದು. ಈ ವಿಚಾರಕ್ಕೆ ನಾನು  ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಆದಷ್ಟು ಬೇಗ ಇದು ಬಗೆ ಹರಿಯುತ್ತದೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ‘ ಶಾಸಕರು ಯಾರು ಮುಂಬೈಗೆ ಹೋಗುತ್ತಿಲ್ಲ. ಹೋದರೆ ಹೋಗಲಿ ಮುಂಬೈ ನೋಡಿಕೊಂಡು ಬರಲಿ. ಸಚಿವ ಸಂಪುಟ ವಿಳಂಬ ಇಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ತಿಳಿಸಿದ್ದಾರೆ.

 

Leave a Reply