ಬೈಕ್ ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿ ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

ಡಿ 16 ರ ಮಧ್ಯರಾತ್ರಿ ಯಲ್ಲಿ ನಗರದ ಪ್ರಮುಖ‌ ರಸ್ತೆ ಹಾಗೂ ಮನೆ ಎದುರು ನಿಲ್ಲಿಸಿದ್ದ ಬೈಕ್ ಗಳಿಗೆ ಬೈಕಿನಲ್ಲಿ ಬಂದ ಕಿಡಿಗೇಡಿ ಬೆಂಕಿ ಇಡುವ ಭಯಾನಕ ದೃಶ್ಯಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೌದು.. ರಾತ್ರೋರಾತ್ರಿ ಐದು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದ ಕಿಡಿಕೇಡಿ ಕಿಲಾಡಿತನ ಸೆರೆಯಾಗಿದೆ. ಚಿಕ್ಕಮಗಳೂರು ಪೊಲೀಸರು ಅನಾಮಿಕ ಕಿಡಿಗೇಡಿಗಾಗಿ ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ.

ಒಂದೇ ರಾತ್ರಿಯಲ್ಲಿ 5 ಬೈಕಿಗೆ ಬೆಂಕಿ ಇಟ್ಟು ಪೊಲೀಸರ ನಿದ್ದೆಗೆಡಿಸಿರೋ ಖತರ್ನಾಕ್ ದುಷ್ಕರ್ಮಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ದೃಶ್ಯ ಸಿಸಿಟಿವಿ ದೃಶ್ಯಗಳನ್ನಿಟ್ಟುಕೊಂಡು ಕೂಲ್ ಆಗಿದ್ದ ಕಾಫಿನಾಡಿನಲ್ಲಿ ಬೆಂಕಿ ಇಟ್ಟವನಿಗಾಗಿ ಪೊಲೀಸರು ಬೆನ್ನು ಬಿದ್ದಿದ್ದಾರೆ. ನಗರದ ಮಾರ್ಕೆಟ್ ರಸ್ತೆ. ಪೆನ್ಷನ್ ಮಹಲ್‌, ಶಾದಿ ಮಹಲ್, ಗೌರಿ ಕಾಲುವೆ ಬಳಿ ಘಟನೆ ನಡೆದಿತ್ತು.

 

 

 

Leave a Reply