ಗಡಿಬಿಡಿಯಲ್ಲಿ ಲೇಡಿಸ್‌ ಟಾಯ್ಲೆಟ್‌ನೊಳಗೆ ಹೋಗಿ ಇಕ್ಕಟ್ಟಿಗೆ ಸಿಲುಕಿದ ರಾಹುಲ್ ಗಾಂಧಿ!!!!

ಛೋಟಾ ಉದಯ್‌ಪುರ್‌ : ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಸುದ್ದಿಯಾಗುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ  ಬಾರಿ ಮಹಿಳೆಯರ ಶೌಚಾಲಯದ ವಿಚಾರವಾಗಿ ಸುದ್ದಿಯಾಗಿದ್ದಾರೆ. ಗುಜರಾತ್ ಪ್ರವಾಸದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗಡಿಬಿಡಿಯಲ್ಲಿ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದು, ಈ ಪೋಟೊ ಎಲ್ಲೆಡೆ ವೈರಲ್ ಆಗಿದೆ. ರಾಹುಲ್‌ ಗಾಂಧಿ ಗುಜರಾತ್‌ನಲ್ಲಿ ಯುವಜನತೆಯ ಜೊತೆ ಸಂವಾದ ನಡೆಸಿದ ಬಳಿಕ ಗಡಿಬಿಡಿಯಲ್ಲಿ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದಾರೆ. ಗುಜರಾತಿ ಭಾಷೆಯಲ್ಲಿ ಮಹಿಲಾವೋ ಮಾತಾ ಶೌಚಾಲಯ್‌ ಎಂಬ ಫಲಕ ಇದ್ದದ್ದನ್ನು ಗಮನಿಸಿದೆ ತೆರಳಿ ಈಗ ಎಲ್ಲೆಡೆ ಟ್ರೋಲ್‌ ಗೆ ಒಳಗಾಗುತ್ತಿದ್ದಾರೆ.

ಬಳಿಕ ರಾಹುಲ್ ಅವರ ಭದ್ರತೆಗಿರುವ ಎಸ್ಪಿಜಿ ಕಮಾಂಡೋಗಳು ಇದನ್ನು ಗಮನಿಸಿ ಕೂಡಲೆ ಒಳಗೆ ತೆರಳಿದ್ದಾರೆ. ಆದರೆ ಅಷ್ಟರಲ್ಲೇ ತಮ್ಮ ತಪ್ಪಿನ ಬಗ್ಗೆ ರಾಹುಲ್ ಗೇ ಅರಿವಾಗಿ ಶೌಚಾಲಯದಿಂದ ಹೊರಗೆ ಬಂದಿದ್ದಾರೆ.

ಈ ವೇಳೆ ಸಾಕಷ್ಟು ಮಹಿಳೆಯರೂ ಶೌಚಾಲಯದ ಬಳಿ ಇದ್ದು, ರಾಹುಲ್‌ ಶೌಚಾಲಯದಿಂದ ಹೊರಬರುವ ಫೋಟೊವನ್ನು ತೆಗೆದಿದ್ದಾರೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಮಮ್ ಗುಜರಾತ್ ಪ್ರವಾಸದ ವೇಳೆ ರಾಹುಲ್ ಗಾಂಧಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದರು. ಜೊತೆಗೆ ಆರ್‌ಎಸ್ಎಸ್ ಮಹಿಳೆಯರು ಖಾಕಿ ಚಡ್ಡಿ ಧರಿಸಿದ್ದನ್ನು ಎಂದಾದರೂ ನೋಡಿದ್ದೀರಾ ಎಂದು ಪ್ರಶ್ನಿಸಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದರು.

Comments are closed.