ಸಿಎಂ ಮತ್ತು ಸಂತೋಶ್ ಜಗಳ್ ಬಂದಿ – ರಾಜ್ಯಕ್ಕೆ ತಗುಲಿದ ಕುಷ್ಠರೋಗ – ಮಾನ್ಪಡೆ ಕಿಡಿ

ಬಿಜೆಪಿ ನಡುವಿನ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಸಿಎಂ ಯಡಿಯೂರಪ್ಪ ಮತ್ತು ಸಂತೋಶ್ ಜಗಳ್ ಬಂದಿಯಿಂದ ರಾಜ್ಯದ ಅಭಿವೃದ್ಧಿಗೆ ಕುಷ್ಟರೋಗ ತಗುಲಿದೆ. ಈಗಲಾದ್ರೂ ಅಭಿವೃದ್ಧಿ ಮಾಡಿ, ರೈತರ ಹಿತ ಕಾಪಾಡಿ ಅಂತ ರೈತ ಮುಖಂಡ ಮಾರುತಿ ಮಾನ್ಪಡೆ ಆಗ್ರಹ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂತೋಶ್ ಜಗಳ್ ಬಂದಿಯಿಂದಾಗಿ ರಾಜ್ಯಕ್ಕೆ ಕುಷ್ಠರೋಗ ತಗಲುವಂತೆ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪಗೆ ಮುಕ್ತವಾಗಿ ಕೆಲಸ ಮಾಡಲು ಬಿಡ್ತಿಲ್ಲ. ಯಡಿಯೂರಪ್ಪ ಮತ್ತು ಸಂತೋಶ್ ಗುಂಪುಗಳ ನಡುವೆ ಕಿತ್ತಾಟ ನಡೆದೇ ಇದ್ದು, ರಾಜ್ಯದ ಅಭಿವೃದ್ಧಿ ಕುಷ್ಠರೋಗ ತಗುಲಿದ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು.

ಹೈಕಮಾಂಡ್ ಸಹ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಬಿಜೆಪಿ ಹಿರಿಯ ನಾಯಕರೂ ಯಡಿಯೂರಪ್ಪಗೆ ತೊಂದರೆ ಕೊಡ್ತಿದಾರೆ. ಮತ್ತೊಂದೆಡೆ ಸಂತೋಷ್ ಸರ್ಕಾರ ನಡೆಯಲು ಬಿಡ್ತಿಲ್ಲ. ಇಬ್ಬರ ಜನಗಳದ ನಡುವೆ ಕೂಲಿಕಾರರು, ಜನಸಾಮಾನ್ಯರು ಬಡವಾಗುವಂತಾಗಿದೆ. ರೈತರಿಗೂ ಪದೇ ಪದೇ ಅನ್ಯಾಯವಾಗುತ್ತಿದೆ. ಕೂಡಲೇ ಜಗಳವಾಡೋದನ್ನು ಬಿಟ್ಟು ಸರಿಯಾದ ಆಡಳಿತ ಕೊಡಿ ಎಂದು ಮಾನ್ಪಡೆ ಆಗ್ರಹಿಸಿದ್ದಾರೆ.

ತೊಗರಿ ಖರೀದಿ ಆರಂಭಿಸದಿರೋದಕ್ಕೆ ಕಿಡಿ….
ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ ಎಂದು ಇದೇ ವೇಳೆ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ. ರೈತ ಸಂಘಟನೆಗಳ ಪರ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರದಿಂದ ಬೇಜವಾಬ್ದಾರಿ ವರ್ತನೆ ಮಾಡುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ತೊಗರಿ ಖರೀದಿ ವಿಳಂಬ ಮಾಡುತ್ತಿದೆ. ರೈತರು ತಮ್ಮ ಬಳಿಯಿದ್ದ ತೊಗರಿ ಮಾರಿದ ಮೇಲೆ ಸರ್ಕಾರ ತೊಗರಿ ಖರೀದಿಸಿ ಪ್ರಕ್ರಿಯೆ ಆರಂಭಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ಪ್ರೋತ್ಸಾಹ ಧನ ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡಲಾಗುತ್ತಿದೆ. ಇದರಿಂದ ರೈತ ಸಮುದಾಯ ಕಂಗಾಲಾಗಿದೆ. ಕೂಡಲೇ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಜೊತೆಗೆ ಪ್ರತಿ ರೈತನಿಗೆ 10 ಕ್ವಿಂಟಲ್ ತೊಗರಿ ಖರೀದಿ ಮಿತಿಯನ್ನು ತೆಗೆಯಬೇಕು. ಪ್ರತಿ ರೈತನಿಂದ ಕನಿಷ್ಠ 25 ಕ್ವಿಂಟಲ್ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಎಂ.ಪಿ. ಕಛೇರಿ ಎದುರು ಅನಿರ್ಧಿಷ್ಟ ಧರಣಿ….
ತೊಗರಿ ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ(ಜನವರಿ 16) ಕಲಬುರ್ಗಿ ಸಂಸದ ಉಮೇಶ್ ಜಾಧವ್ ಕಛೇರಿ ಎದುರು ಹೋರಾಟ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ರೈತ ಸಂಘ, ರೈತ, ಕೃಷಿ ಕೂಲಿಕಾರರ ಸಂಘ ಮತ್ತಿತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಾಳೆಯಿಂದ ಅನಿರ್ಧಿಷ್ಟ ಧರಣಿ ಆರಂಭಿಸಲಾಗುವುದು. ಈ ಮುಂಚೆ ಸಂಸದರ ನಿವಾಸದ ಎದುರು ಪ್ರತಿಭಟನೆ ನಡೆಸಿದಾಗ, ಉದ್ದೇಶಪೂರ್ವಕವಾಗಿಯೇ ಉಮೇಶ್ ಜಾಧವ್ ಹೋರಾಟಗಾರರನ್ನು ಭೇಟಿ ಮಾಡಿರಲಿಲ್ಲ. ಈಗ ಮಾತ್ರ ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯೋದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.