ನಮ್ಮನ್ನು ಜೈಲಿಗೆ ಕಳಿಸುವುದಿರಲಿ, ಮೊದಲು ಬಿಎಸ್‌ವೈ ಜೈಲಿಗೆ ಹೋಗೋದನ್ನು ತಪ್ಪಿಸಿಕೊಳ್ಳಲಿ : ಸಿಎಂ

ಬೆಂಗಳೂರು :ಬೆಂಗಳೂರಿನ ವಸಂತನಗರದಲ್ಲಿ ನಿರ್ಮಿತವಾದ ಸರ್ಕಾರಿ ಗ್ರೂಪ್ ಎ ಅಧಿಕಾರಿಗಳ ಮೊದಲ ಹಂತದ ವಸತಿ ಸಂಕೀರ್ಣವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಮಹದೇವಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಸಚಿವ ರೋಷನ್ ಬೇಗ್ ,ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್ ಭಾಗಿಯಾಗಿದ್ದು, 32 ಪ್ಲಾಟ್‌ಗಳನ್ನು ಉದ್ಘಾಟನೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕ್ಲಾಸ್ ಫಸ್ಟ್ ಅಧಿಕಾರಿಗಳಿಗೆ ವಸತಿ ಸಂಕೀರ್ಣವನ್ನು ನಿರ್ಮಿಸಿ ಕೊಡಲಾಗಿದೆ. ಮುಂಚೆ ಐದು ಮನೆ ಇತ್ತು. ಅದನ್ನು ಡೆಮಾಲಿಷನ್ ಮಾಡಿ 19ಕ್ವಾಟರ್ಸ್ ನ್ನು ನಿರ್ಮಿಸಲಾಗಿದೆ. ಕೆಲವು ಹಳೆಯ ವಸತಿ ಕಟ್ಟಡಗಳು ಬಿದ್ದಿದೆ. ವಯಸ್ಸು ಆದ ಮೇಲೆ ಬಿದ್ದು ಹೋಗುವುದು ಸಹಜ. ಮನುಷ್ಯರು ವಯಸ್ಸಾದ ಮೇಲೆ ಸಾಯಲ್ವಾ ಅದೇ ರೀತಿ ಇವೂ ಬಿದ್ದು ಹೋಗಿವೆ ಎಂದಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ಕುರಿತು ಹೇಳಿಕೆ ನೀಡಿದ ಸಿಎಂ, ನಮ್ಮನ್ನು ಜೈಲಿಗೆ ಕಳಿಸುವ ಮೊದಲು ಯಡಿಯೂರಪ್ಪ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿ.ಅವರು ಅಧಿಕಾರಕ್ಕೆ ಬಂದರೆ ತಾನೇ ಏನಾದರೂ ಮಾಡಲು ಸಾಧ್ಯ. ಅವರು ಖಂಡಿತ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಅಮಿತ್ ಷಾ ಯಡಿಯೂರಪ್ಪ ಗೆ ಬೈಯ್ದುಬಿಟ್ಟಿದ್ದಾರೆ. ಅದಕ್ಕೆ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಹುಲ್ ಗಾಂಧಿ ಜತೆ ಮಾತನಾಡಿದ್ದೇನೆ. ಇಷ್ಟರಲ್ಲೇ ವಿಸ್ತರಣೆ ಮಾಡಲಾಗುತ್ತದೆ. ಗೃಹ ಖಾತೆ ಯಾರಿಗೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದಿದ್ದಾರೆ.

 

Comments are closed.