‘ಸಮ್ಮಿಶ್ರ ಸರ್ಕಾರ ಸೇಫ್, 4 ವರ್ಷ ಹೆಚ್ ಡಿಕೆ ಸಿಎಂ’ ಜಿ.ಪರಮೇಶ್ವರ್ ಸ್ಪಷ್ಟ

ಲೋಕಸಭಾ ಚುನಾವಣೆ ರಿಸಲ್ಟ್ ಬಳಿಕ ಸಿಎಂ ಮೊದಲ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಮಾತನಾಡಿ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. 4 ವರ್ಷ ಹೆಚ್ ಡಿಕೆ ಸಿಎಂ ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಜಿ. ಪರಮೇಶ್ವರ್ ಮಾತನಾಡಿ, ‘ಸಿಎಂ ನೇತೃತ್ವದ ಸರ್ಕಾರ ಮುಂದುವರೆಯುತ್ತದೆ. ಈ ನಿರ್ಧಾರವನ್ನು ಎಲ್ಲಾ ಸಚಿವರು ಒಗ್ಗೂಡಿ ತೆಗೆದುಕೊಂಡಿದ್ದೇವೆ. ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರೋದಿಲ್ಲ. ಒಂದು ವರ್ಷ ಕಳೆದಿದ್ದೇವೆ ಇನ್ನೂ 4 ವರ್ಷ ಮುಂದುವರೆಸುತ್ತೇವೆ.’

ಕೇಂದ್ರದಲ್ಲಿ ಯಾರು ಅಧಿಕಾರ ನಡೆಸಬೇಕು ಅನ್ನೋದಕ್ಕೆ ನಡೆದ ಚುನಾವಣೆ ಮತ್ತು ಅದರ ಫಲಿತಾಂಶ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು 5 ವರ್ಷದ ಅವಧಿ ಪೂರ್ಣಗೊಳಿಸುತ್ತೇವೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಈ ಬಗ್ಗೆ ಗೊಂದಲ ಬೇಡ.

ವಿಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸಲು ನೋಡುತ್ತಿದ್ದಾರೆ. ಅಪರೇಷನ್ ಕಮಲ ಸಕ್ಸಸ್ ಆಗೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

Leave a Reply