ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ : ಡಿಕೆ ಶಿವಕುಮಾರ ಟೆಂಪಲ್ ರನ್ – ಶಕ್ತಿ ದೇವತೆಗೆ ಪೂಜೆ

ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಡೆ ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿದೆ. ಮತ್ತೊಂದೆಡೆ ಕೆಪಿಸಿಸಿ ಸ್ಥಾನ ಪಡೆಯಬೇಕೆಂದು ಮಾಜಿ ಸಚಿವ ಡಿಕೆ ಶಿವಕುಮಾರ ಟೆಂಪಲ್ ರನ್ ನಡೆಸಿದ್ದಾರೆ. ಮಧ್ಯಪ್ರದೇಶದ ಬಾಗಲಮುಖಿ ಸನ್ನಿಧಾನದಲ್ಲಿ ಡಿಕೆಶಿ ಹೊಮ ಹವನ ಮಾಡಿದ್ರೆ ಯಾದಗಿರಿಯಲ್ಲಿಯೂ ಕೂಡ ಗಡೇ ದುರ್ಗಾದೇವಿ ದೇವಾಲಯದಲ್ಲಿ ಡಿಕೆಶಿ ಸೂಚನೆಯಂತೆ ಕೆಪಿಸಿಸಿ ಸ್ಥಾನಕ್ಕಾಗಿ ಪೂಜೆ ಮಾಡಲಾಗಿದೆ.

ಮಾಜಿ ಸಚಿವ ಡಿಕೆಶಿವಕುಮಾರ ಅವರನ್ನು ಕೆಪಿಸಿಸಿ ಸ್ಥಾನ ಸಿಗುವದು ಬಹುತೇಕ ಖಚೀತ ಎನ್ನಲಾಗುತಿತ್ತು.ಆದರೆ ,ಆಯ್ಕೆ ವಿಚಾರ ಇನ್ನೂ ವಿಳಂಬವಾಗುತ್ತಿದೆ.
ಕೆಪಿಸಿಸಿ ಪಟ್ಟಕ್ಕಾಗಿ ಈಗ ಭಾರಿ ಪೈಪೋಟಿ ನಡೆಯುತ್ತಿದೆ.

ಕೆಪಿಸಿಸಿ ಸ್ಥಾನವು ಬೇಗ ಸಿಗದ ಕಾರಣ ಡಿಕೆಶಿವಕುಮಾರ ಅವರು ಈಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.ಮಧ್ಯಪ್ರದೇಶದ ಬಾಗಲಮುಖಿ ದೇವರ ಸನ್ನಿಧಿಯಲ್ಲಿ ಹೊಮ‌ ಹವನ ಮಾಡಿ ,ಕೆಪಿಸಿಸಿ ಪಟ್ಟ ಸಿಗಬೇಕು,ಶತ್ರು ಸಂಹಾರ,ಸಂಕಷ್ಟ ‌ನಿವಾರಣೆಯಾಗಬೇಕೆಂದು ಬಾಗಲಮುಖಿಯ ದೇವಿಯ ಮೋರೆ ಹೋಗಿದ್ದಾರೆ. ಒಂದು ಕಡೆ ಬಾಗಲಮುಖಿ ದೇವಿಯ ಕೃಪೆಗೆ ಪಾತ್ರರಾದ್ರೆ ಮತ್ತೊಂದೆಡೆ ಡಿಕೆಶಿವಕುಮಾರಗೆ ಕೆಪಿಸಿಸಿ ಸ್ಥಾನ ಸಿಗಬೇಕೆಂದು ಯಾದಗಿರಿ ಜಿಲ್ಲೆ
ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ಮಂದಿರದಲ್ಲಿ ಡಿಕೆಶಿ ಸೂಚನೆಯಂತೆ ವಿಶೇಷ ಪೂಜೆ ಮಾಡಲಾಗಿದೆ.

ಈ ಬಗ್ಗೆ ಅರ್ಚಕ ಮಹಾದೇವಪ್ಪ ಪೂಜಾರಿ ಅವರು ಮಾತನಾಡಿ,ಇದೆ ಭಾನುವಾರ ನಾನು ಬೆಂಗಳೂರುಗೆ ಹೊಗಿದ್ದೆ ಡಿಕೆಶಿವಕುಮಾರ ಅವರು ಕೆಪಿಸಿಸಿ ಸ್ಥಾನ ಸಿಗಲು ವಿಶೇಷ ಪೂಜೆ ಮಾಡಬೇಕೆಂದು ಸೂಚನೆ ನೀಡಿದರು‌ ಹೀಗಾಗಿ ದೇವಿಯ ಮೂರ್ತಿ ಮುಂದೆ ಪತ್ರ ಬರೆದು ಡಿಕೆಶಿವಕುಮಾರ ಗೆ ಕೆಪಿಸಿಸಿ ಸ್ಥಾನ ಸಿಗಬೇಕೆಂದು ಪೂಜೆ ಮಾಡಲಾಗಿದೆ.ಅದೆ ರೀತಿ ಇದೆ 28 ರಿಂದ ಎರಡು ದಿನಗಳ ಕಾಲ ದೇವಿಯ ಜಾತ್ರೆ ನಡೆಯಲಿದೆ. ಜಾತ್ರೆಗೆ 29 ರಂದು ಡಿಕೆಶಿವಕುಮಾರ ಆಗಮಿಸಿ ವಿಶೇಷ ಪೂಜೆ ಮಾಡಿ ಹರಕೆ ಈಡೇರಿಸಲಿದ್ದಾರೆಂದರು.

ಡಿಕೆಶಿವಕುಮಾರ ಅವರು ಖುದ್ದು ಗಡೇ ದುರ್ಗಾದೇವಿ ದೇಗುಲದ ಅರ್ಚಕ ಮಹಾದೇವಪ್ಪ ಪೂಜಾರಿ ಅವರಿಗೆ ಕೆಪಿಸಿಸಿ ಪಟ್ಟ ಸಿಗಬೇಕೆಂದು ದೇವಿಯ ಪಾದದ ಭಾಗದಲ್ಲಿ ಪತ್ರ ಬರೆದು ಪೂಜೆ ಮಾಡಬೇಕೆಂದು ಸೂಚನೆ ನೀಡಿದ ಹಿನ್ನೆಲೆ, ಇಂದು ಬೆಳಿಗ್ಗೆ ಮಹಾದೇವಪ್ಪ ಪೂಜಾರಿ ಅವರು ಡಿಕೆಶಿಗಾಗಿ ವಿಶೇಷ ಪೂಜೆ ಮಾಡಿದ್ದಾರೆ.ಡಿಕೆಶಿ ಅವರು ಸಾಕಷ್ಟು ಬಾರಿ ಸಂಕಷ್ಟ ಬಂದಾಗ ಗಡೇ ದುರ್ಗಾದೇವಿ ದೇವಿಯ ಮೋರೆ ಹೋಗುತ್ತಾರೆ. ದೇವಿಯ ಕೃಪೆಯಿಂದ ಡಿಕೆಶಿ ಸಂಕಷ್ಟದಿಂದ ಪಾರಾಗಿದ್ದಾರೆಂದು ಪೂಜಾರಿ ಅವರ ಮಾತಾಗಿದೆ.

ಇದೆ 28 ರಿಂದ ಗಡೇ ದುರ್ಗಾದೇವಿ ಜಾತ್ರೆ ಇದ್ದು,ಖುದ್ದು ಡಿಕೆಶಿ ಅವರು ಜಾತ್ರೆಗೆ 29 ರಂದು ಆಗಮಿಸಿ ವಿಶೇಷ ಪೂಜೆ ನೆರವೇರಿಸಿ ಹರಕೆ ತಿರಿಸಲಿದ್ದಾರೆ.ಕಳೆದ ವರ್ಷ ನಡೆದ ಜಾತ್ರೆಗೆ ಬರುತ್ತೆನೆಂದು ಡಿಕೆಶಿ ಹೇಳಿ ನಂತರ ರಾಜಕೀಯ ‌ಬೆಳವಣಿಯ ಅನಿವಾರ್ಯ ಕಾರಣದಿಂದ ಬಂದಿಲ್ಲ.ಇದರಿಂದ ಡಿಕೆಶಿವಕುಮಾರ ಗೆ ಸಂಕಷ್ಟ ಎದುರಾಗಿತ್ತು‌ ಎನ್ನಲಾಗುತಿತ್ತು.ನಂತರ ದೇವಿಯ ಕೃಪೆಯಿಂದ ಸಂಕಷ್ಟ ದಿಂದ ಪಾರು ಮಾಡಿದ್ದಾಳಂತೆ.ಈಗ ಬಾಗಲಮುಖಿ ಹಾಗೂ ಗಡೇ ದುರ್ಗಾದೇವಿ ಕೃಪೆಯಿಂದ ಕೆಪಿಸಿಸಿ ಪಟ್ಟದ ಸ್ಥಾನ ಡಿಕೆಗೆ ಒಲಿಯುತ್ತಾ ಕಾದು ನೋಡಬೇಕಿದೆ.