ರಾಜ್ಯದಲ್ಲಿ ಮತ್ತೆ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಅನಿವಾರ್ಯ – ಮಾಜಿ ಸಿಎಂ ವೀರಪ್ಪ ಮೋಯ್ಲಿ

ರಾಜ್ಯದಲ್ಲಿ ಮತ್ತೆ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಅನಿವಾರ್ಯ ಎಂದು ಹುಣಸೂರಿನಲ್ಲಿ ಮಾಜಿ‌ ಸಿಎಂ ವೀರಪ್ಪಮೋಯ್ಲಿ ಜೆಡಿಎಸ್ ಜೊತೆ ಕೈ ಹಿಡಿಯುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಹೌದು…  ಬಿಜೆಪಿ ಮಾಡಿದ ಮೋಸದಿಂದ ಸರ್ಕಾರ ಪತ‌ನವಾಯಿತು. ಈಗ ಮತ್ತೆ ರಾಜ್ಯದಲ್ಲಿ ಮೈತ್ರಿ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಈಗ ಮತ್ತೊಂದು ಮಹಾಚುನಾವಣೆ ಭಾರವನ್ನ ಜನರ ಮೇಲೆ ಹೇರಲು‌ ನಾವು ಸಿದ್ದರಿಲ್ಲ. ಶತ್ರುಗಳ ಶತ್ರು ಮಿತ್ರ ಅನ್ನೋ ರೀತಿ ನಮಗೆ ಬಿಜೆಪಿಯೇ ಕಾಮನ್ ಎನಿಮಿ ಆಗಿದೆ. ಹೀಗಾಗಿ ಆಗಿರುವ ತಪ್ಪುಗಳನ್ನ ಮರೆತು ಮತ್ತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಕೇಂದ್ರ ರಾಜ್ಯದಲ್ಲಿರೋದು ಬಿಜೆಪಿಯ ದರಿದ್ರ ಸರ್ಕಾರ. ಇಂತಹ ದರಿದ್ರ ಸರ್ಕಾರ ಯಾರಿಗೆ ಬೇಕಾಗಿದೆ. ಸದ್ಯಕ್ಕೆ ಮೈತ್ರಿ ಅನಿವಾರ್ಯತೆ ಇದೆ ಎಂದು ದೋಸ್ತಿಯಾಗುವ ಸೂಚನೆ ನೀಡಿದ್ದಾರೆ.

ಮತ್ತೆ ಮೈತ್ರಿ ಮಾಡಿಕೊಳ್ಳಲು ಹೈಕಮಾಂಡ್ ಸೂಚನೆ ನೀಡಲಿದೆ. ಹೈಕಮಾಂಡ್ ಮಧ್ಯ ಪ್ರವೇಶದಿಂದಲೇ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಜೆಡಿಎಸ್‌ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸೋ ಪ್ರಶ್ನೆಯೇ ಇಲ್ಲ. ನಮಗೇಲ್ಲರಿಗು ಮೈತ್ರಿ ಅನಿವಾರ್ಯ ಇದೆ. ಜೆಡಿಎಸ್‌ನವರಿಗು ಇದೆ ಮನಸ್ಥತಿ ಇದೆ. ಮುಂದೆ ಮುಖ್ಯಮಂತ್ರಿ ಯಾರಬೇಕು ಅನ್ನೋದು ಸದ್ಯಕ್ಕೆ ಅಪ್ರಸ್ತುತ ಎಂದಿದ್ದಾರೆ.

Leave a Reply