ಗ್ರಾಹಕರ ಕಣ್ಣೀರು ಒರೆಸಿದ ಈರುಳ್ಳಿ ಬೆಲೆ ಇಳಿಕೆ : ಸದ್ಯದ ದರವೆಷ್ಟು..?

ಈ ಭಾನುವಾರ ಮಾರುಕಟ್ಟೆಯ ಸಂತೆಗಳಲ್ಲಿ ಈರುಳ್ಳಿಯ ದರ ಕಡಿಮೆ ಕಂಡುಬಂದಿತು. ಸದ್ಯ ಗ್ರಾಹಕರಲ್ಲಿ ನೆಮ್ಮದಿಯಾಗಿ ಈರುಳ್ಳಿ ಖರೀದಿಸುವ ಭಾವ ಮೂಡಿದೆ. 70 ರಿಂದ 80 ರೂ, ಸಹ ದೊಡ್ಡ ಮೊತ್ತವಾಗಿದ್ದು, ಇನ್ನೂ ಕಡಿಮೆಯಾಗಲಿ ಎಂದು ಗ್ರಾಹಕರು ಎದುರು ನೋಡುತ್ತಿದ್ದಾರೆ.

ಈರುಳ್ಳಿಯ ಬೆಲೆ ಏರಿಕೆಯಾಗಿದ್ದರಿಂದ ಹೋಟೆಲ್ ಮತ್ತು ಮನೆಗಳಲ್ಲಿ ಅದರ ಬಳಕೆ ಕಡಿಮೆ ಇತ್ತು, ಈರುಳ್ಳಿ ಬಳಸುವ ಪದಾರ್ಥವನ್ನೇ ತಯಾರಿಸುವನ್ನು ನಿಲ್ಲಿಸಿದ್ದರು, ಮತ್ತು ಕಡಿಮೆ ಉಪಯೋಗಿಸುತ್ತಿದ್ದರು. ಹೋಲ್ ಸೇಲ್ ಗಳಲ್ಲಿ ಖರೀದಿಸಿದರೂ ಹೋಟೆಲ್ ನವರಿಗೆ ನಷ್ಟವಾಗುತ್ತಿತ್ತು. ಹೀಗಾಗಿ ಎಷ್ಟು ಅಗತ್ಯವಿತ್ತೋ ಅಷ್ಟನ್ನೇ ಮಾತ್ರ ಬಳಸುತ್ತಿದ್ದರು.

Leave a Reply

Your email address will not be published.