ಸಂಸ್ಕೃತ ಮಾತನಾಡುವುದರಿಂದ ಮನುಷ್ಯನ ಕಾಯಿಲೆ ನಿಯಂತ್ರಣ -ಗಣೇಶ್ ಸಿಂಗ್

ಸಂಸ್ಕೃತ ಭಾಷೆಯನ್ನು ನಿತ್ಯವೂ ಮಾತನಾಡುವುದರಿಂದ ಮನುಷ್ಯನ ನರಮಂಡಲ ವ್ಯವಸ್ಥೆ ವಿಸ್ತರಿಸುವುದು, ಸಕ್ಕರೆ ಕಾಯಿಲೆ ಮತ್ತು ಕೊಬ್ಬನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಬಿಜೆಪಿ ಸಂಸದ ಗಣೇಶ್ ಸಿಂಗ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಸಂಸ್ಕೃತ ಕೇಂದ್ರ ವಿಶ್ವವಿದ್ಯಾಲಯಗಳ ಮಸೂದೆ-2019ರ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಅಮೆರಿಕಾ ಮೂಲದ ಅಕಾಡೆಮಿಕ್ ಸಂಸ್ಥೆಯೊಂದು ಸಂಶೋಧನೆ ನಡೆಸಿದ್ದು ಇದು ಸಾಬೀತಾಗಿದೆ, ಸಂಸ್ಕೃತ ಭಾಷೆಯನ್ನು ಮಾತನಾಡುವುದರಿಂದ ಸಾಕಷ್ಟು ಲಾಭಗಳಿವೆ ಎಂಬುದನ್ನು ದೃಢೀಕರಿಸಿದೆ ಎಂದು ತಿಳಿಸಿದ್ದಾರೆ.

ಸಂಸ್ಕೃತ ಲಿಪಿಗಳನ್ನುಗಳನ್ನು ಅಳಡಿಸಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಬಹುದು. ಅಮೆರಿಕಾದ ನ್ಯಾಷನಲ್ ಏರೋನಾಟಿಕ್ ಅಂಡ್ ಸ್ಪೇಸ್ ಅಡ್ಮಿನಿಷ್ಟ್ರೇಷನ್ ನಾಸಾ ಸಂಸ್ಥೆ ಇದನ್ನು ಪ್ರಯೋಗ ಮಾಡಿದೆ. ಇಸ್ಲಾಮಿಕ್ ಭಾಷೆಯೂ ಸೇರಿದಂತೆ ವಿಶ್ವದ 97ರಷ್ಟು ಭಾಷೆಗಳು ಸಂಸ್ಕೃತದ ಆಧಾರದ ಮೇಲೆಯೇ ರೂಪಿತವಾಗಿವೆ ಎಂದು ಹೇಳಿದರು.

ಸಂಸ್ಕೃತ ಕೇಂದ್ರ ವಿಶ್ವವಿದ್ಯಾಲಯಗಳನ್ನು ಮೂರು ಡೀಮ್ಡ್ ವಿಶ್ವವಿದ್ಯಾಲಯಗಳನ್ನಾಗಿ ಬದಲಿಸಿದ್ದು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ನವದೆಹಲಿ, ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ತಿರುಪತಿ ಡೀಮ್ಡ್ ವಿವಿಗಳಾಗಿವೆ ಎಂದಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ರಮೇಶ್ ಪೋಕ್ರಿಯಲ್ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲಾ ಬಾಷೆಗಳನ್ನು ಬಲಪಡಿಸಲಿದೆ. ತಮಿಳು, ಹಿಂದಿ, ಕನ್ನಡ ಮತ್ತು ಬಂಗಾಳಿಯೂ ಸೇರಿದಂತೆ ಭಾರತದ ಎಲ್ಲಾ ಭಾಷೆಗಳ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಂಸ್ಕೃತ ಪಠ್ಯಗಳಜು ಜ್ಞಾನದ ಖಜಾನೆ. ಅದು ವಿಜ್ಞಾನದಿಂದ ಅರ್ಥಶಾಸ್ತ್ರದವರೆಗೆ ಎಲ್ಲವನ್ನೂ ಒಳಗೊಂಡಿದೆ. ಹೀಗಾಗಿ ಸಂಸ್ಕೃತದ ಪಠ್ಯಗಳನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಸಭೆ ತಿಳಿಸಿದರು.

ಸಂಸ್ಕೃತ ಭಾಷೆಯಿಂದ ಮಧುಮೇಹ ಮತ್ತು ಕೊಬ್ಬನ್ನು ನಿಯಂತ್ರಿಸಬಹುದು ಎಂಬ ಸಂಸದ ಗಣೇಶ್ ಸಿಂಗ್ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಜನರಲ್ಲಿ ಮೌಢ್ಯ ತುಂಬುವ ಹೇಳಿಕೆಯಾಗಿದ. ದೇಶದ ಆರ್ಥಿಕ ಹಿಂಜರಿತ, ನಿರುದ್ಯೋಗ, ಉದ್ಯೋಗ ಕಡಿತ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಉದ್ದೇಶವಾಗಿದೆ  ಎಂದು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Leave a Reply