Corona in karnataka : 50 ಹತ್ತಿರ ತಲುಪಿದ ಸೋಂಕಿತರ ಸಂಖ್ಯೆ, ರಾಜ್ಯ ಸಂಪೂರ್ಣ ಬಂದ್..

ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 40 ದಾಟಿರುವ ಹಿನ್ನೆಲೆಯಲ್ಲಿ ಮಂಗಳವಾರ  ರಾತ್ರಿಯಿಂದ ಬೆಂಗಳುರು ಗಡಿಯನ್ನು ಸಂಪೂರ್ಣ ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೋರನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕಠೀ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೊರೋನಾ ಹರಡುವ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಇಡೀ ಕರ್ನಾಟಕ ಲಾಕ್‌ಡೌನ್‌ ಆಗಿದ್ದು ಜನ ಬೀದಿಗಿಳಿಯುವದನ್ನು ತಡೆಯಲು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಈ ಮಧ್ಯೆ ಯುಗಾದಿ ಸರಳವಾಗಿ ಹಬ್ಬ ಆಚರಿಸಬೇಕು. ಯಾರೂ ಹೊರಗೆ ಬರಬಾರದು. ಕರ್ಫ್ಯೂ ವಾತಾವರಣ ಇರಬೇಕೆಂಬ ಅಪೇಕ್ಷೆಯಿತ್ತು. ಆರೋಗ್ಯದ ಹಿತದೃಷ್ಟಿಯಿಂದ ಯಾರೂ ಹೊರಗೆ ಬರಬಾರದು ಎಂದು ಬಿಎಸ್ವೈ ಮನವಿ ಮಾಡಿದ್ದಾರೆ.

ಹಣಕಾಸು ಮಸೂದೆಗೆ ಸರಕಾರ ಅಂಗೀಕಾರ ಪಡೆಯುವದರೊಂದಿಗೆ ವಿಧಾನಮಂಡಲ ಕಲಾಪವನ್ನು ಮಂಗಳವಾರ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲಾಯಿತು.

ಈ ಹಿನ್ನೆಲೆಯಲ್ಲಿ ಎಲ್ಲ ಸಚಿವರು ಕೂಡಲೇ ತಮ್ಮ ಜಿಲ್ಲೆಗಳಿಗೆ ತೆರಳಬೇಕು. ಪ್ರತಿ ಜಿಲ್ಲೆಯ ಜವಾಬ್ದಾರಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳಬೇಕು ಎಂದುಸಚಿವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಾಕೀತು ಮಾಡಿದ್ದಾರೆ.