ನೆರೆಯ ಮಹಾರಾಷ್ಟ್ರದಲ್ಲಿ 31 ಜನರಿಗೆ ಕೊರೊನಾ : ರಾಜ್ಯದ ಪ್ರಯಾಣಿಕರ ಮೇಲಿಲ್ಲ ನಿಗಾ

ನೆರೆಯ ಮಹಾರಾಷ್ಟ್ರದಲ್ಲಿ ಅಂದಾಜು 31 ಜನ್ರಿಗೆ ಕೊರೊನಾ ದೃಢಪಟ್ಟಿದ್ದು ಸದ್ಯ ಕರ್ನಾಟದಲ್ಲಿ ಹೆಚ್ಚು ಜನರ ಆತಂಕಕ್ಕೆ ಕಾರಣವಾಗಿದೆ.

ಹೌದು… ನಿತ್ಯ ಬಾಗಲಕೋಟೆ ಜಿಲ್ಲೆಯಿಂದ ಮಹಾರಾಷ್ಟ್ರ ರಾಜ್ಯಕ್ಕೆ 82ಬಸ್ ಸಂಚಾರ ಮಾಡುತ್ತವೆ. ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ 3ಬಸ್ ಜಿಲ್ಲೆಯ ಜಮಖಂಡಿಗೆ ಸಂಚಾರ ಮಾಡುತ್ತವೆ.  ಕಲ್ಬುರ್ಗಿಗೆ ಜಿಲ್ಲೆಯಿಂದ ನಿತ್ಯ 10ಬಸ್ ಓಡಾಟ ಮಾಡುತ್ತವೆ. ಹೀಗಿರುವಾಗ ಜಿಲ್ಲಾಡಳಿತದಿಂದ ಕೊರೊನಾ ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಪ್ರಯಾಣಿಕರ ಮೇಲಿಲ್ಲ ನಿಗಾ ವಹಿಸಲಾಗಿಲ್ಲ. ಅವರನ್ನ ತಪಾಸಣೆಗೆ ಒಳಪಡಿಸುವಂತಹ ಕೆಲಸವೂ ಕೂಡ ಆಗಿಲ್ಲ. ಹೀಗಾಗಿ ಜನರಲ್ಲಿ ಸೋಂಕು ಹರಡುವ ಬಗ್ಗೆ ಆತಂಕ ಶುರುವಾಗಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕ ಬಾರಿಸಿದ್ದು, 107 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ 9 ಕೊರೋನಾ ವೈರಸ್ ಸೋಂಕು ತಗುಲಿದವರು ಇಂದು ದೃಢಪಟ್ಟಿದ್ದು ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31ಕ್ಕೇರಿದ್ದು ಕೇರಳವನ್ನು ಹಿಂದಿಕ್ಕಿದೆ.

ಜಿಲ್ಲಾಡಳಿತ ಕೇವಲ ವಿದೇಶದಿಂದ ಬರುವವರ ಮೇಲೆ ನಿಗಾಯಿಟ್ಟಿದ್ದು  ಬಸ್ ನಲ್ಲಿ ಪ್ರಯಾಣಿಸೋ ಪ್ರಯಾಣಿಕರ ಮೇಲಿಲ್ಲ ನಿಗಾ ಇಟ್ಟು ತಪಾಸಣೆ ಮಾಡಲಾಗುತ್ತಿಲ್ಲ. ನೆರೆ ಮಹಾರಾಷ್ಟ್ರ, ಕಲ್ಬುರ್ಗಿ ಗೆ ಹೋಗಿ ಬರುವ ಬಸ್ ನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಂದ ಕೊರೊನಾ ಜಿಲ್ಲೆಗೆ ಹರಡುವ ಆತಂಕ ಶುರುವಾಗಿದೆ. ಮಹಾರಾಷ್ಟ್ರದ ಮುಂಬೈ,ಪುನಾ,ಸಾಂಗ್ಲಿ ,ಮೀರೆಜ್ , ಕೊಲ್ಲಾಪುರ, ಸೋಲ್ಲಾಪುರಕ್ಕೆ ನಿತ್ಯ 8ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಓಡಾಟ ಮಾಡುತ್ತಾರೆ.‌

ವ್ಯಾಪಾರ, ವಹಿವಾಟಿಗಾಗಿ ನೆರೆ ರಾಜ್ಯಕ್ಕೆ ಹೋಗಿಬರುತ್ತಾರೆ. ಕಲ್ಬುರ್ಗಿಗೆ ನಿತ್ಯ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಓಡಾಡುತ್ತಾರೆ. ಮಹಾರಾಷ್ಟ್ರ, ಕಲ್ಬುರ್ಗಿಯಲ್ಲಿ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿರೋ ಬೆನ್ನಲ್ಲೇ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ.

ಬಸ್ ನಿಲ್ದಾಣದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಆಡಿಯೋ ಪ್ರಸಾರ ಮಾಡಲಾಗುತ್ತಿದೆ.  ಆದ್ರೆ ಇಲ್ಲಿಯವರೆಗೂ ಹೆಲ್ಪ್ ಲೈನ್ ಕೇಂದ್ರ ತೆರೆದಿಲ್ಲ . ಬಸ್ ಗಳಿಗೆ ಔಷಧಿ ಸಿಂಪರಣಾ ಕಾರ್ಯ ಆಗಿದ್ರು, ಚಾಲಕರು, ನಿರ್ವಾಹಕರಿಗೆ ಮಾಸ್ಕ್,ಹ್ಯಾಂಡ್ ಗ್ಲೋಜ್ ಕೊಟ್ಟಿಲ್ಲ.

ನಿತ್ಯ ಸೊಲ್ಲಾಪುರಕ್ಕೆ ಬಾಗಲಕೋಟೆ ಮಾರ್ಗವಾಗಿ ೩ರೈಲು ಓಡಾಡುತ್ತವೆ. ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮೂಲಕವೂ ಹತ್ತಾರು ಬಸ್ ಓಡಾಟ ಮಾಡುತ್ತವೆ. ಆದ್ರೆ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡೋದೆ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಜಿಲ್ಲಾಡಳಿತ,ಆರೋಗ್ಯ ಇಲಾಖೆ,ಸಾರಿಗೆ ಇಲಾಖೆಯಿಂದ ಮುಂಜಾಗ್ರತಾ ಕಾರ್ಯ ಇನ್ಮೇಲಾದರೂ ನಡೆಸುತ್ತಾ ಕಾದು ನೋಡಬೇಕಿದೆ.