ಯುಗಾದಿ ಹಬ್ಬಕ್ಕೂ ಕೊರೊನಾ ಎಫೆಕ್ಟ್ : ಸಿಹಿಗಿಂತ ಕಹಿ ಹಂಚಿತಾ ಹೊಸ ವರ್ಷ..?

ಬೇವು ಬೆಲ್ಲ ತಿಂದು ಸಿಹಿ ಸಿಹಿ ಮಾತನಾಡಿ. ಸಿಹಿಯನ್ನು ಹಂಚಿ ಎಂದು ಹಿರಿಯರು ಕಿರಿಯರಿಗೆ ಆಶೀರ್ವದಿಸುವುದು ಸಾಮಾನ್ಯವಾಗಿ ಯುಗಾದಿಯಂದು. ಆದ್ರೆ ಈ ಬಾರಿ ಯುಗಾದಿ ಹಬ್ಬಕ್ಕೆಂದು ಶುಭಾಶಯ ಕೋರುವುದಕ್ಕೂ ಜನ ಹೆದರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿ ಬಿಟ್ಟದೆ.

ಹೌದು… ಹಿಂದೂ ಸಂಪ್ರದಾಯದಂತೆ ಯುಗಾದಿ ಹಬ್ಬಕ್ಕೆ ಪರಸ್ಪರ ಬೇವು ಬೆಲ್ಲ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಜನ ಪರಸ್ಪರ ಶುಭಾಶಯ ಕೋರುವುದಿರಲಿ ಜನ ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ಇನ್ನೂ ಮನೆಯಲ್ಲಿ ಸಂಬಂಧಿಕರು ಎಲ್ಲರೂ ಸೇರಿ ಆಚರಿಸಬೇಕಿದ್ದ ಹಬ್ಬವನ್ನ ಊರುಗಳಿಗೂ ತೆರಳದೇ ಜನ ಬೇಸರದಿಂದ ಆಚರಿಸುತ್ತಿದ್ದಾರೆ. ಸಿಹಿ ತಯಾರಿಸಿ ಎಲ್ಲರಿಗೂ ಕೊಟ್ಟು ಪರಸ್ಪರ ಸಂತೋಷದಿಂದ ಆಚರಿಸಬೇಕಾದ ಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಿದ್ದು, ಜನ ಬಹುಬೇಗ ಈ ಮಹಾಮಾರಿಯಿಂದ ಮುಕ್ತಿ ಸಿಗಲಿ ಎಂದು ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಹಬ್ಬಕ್ಕೆ ಜನ ನೆನ್ನೆಯಿಂದಲೇ ತಯಾರಿ ನಡೆಸಬೇಕಾಗಿತ್ತು. ಆದರೆ ನೆನ್ನೆಯಿಂದ ಏಪ್ರಿಲ್ 14 ರವೆಗೂ ಕರ್ನಾಟಕ ಲಾಕ್ ಡೌನ್ ಆದ ಪರಿಣಾಮ ಜನ ಮಾರುಕಟ್ಟೆಗೆ ಬಂದರೂ ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ. ಇನ್ನೂ ಮಾರಾಟಗಾರರಿಗೂ ಚದುರಿಸುವಂತಹ ಕೆಲಸ ಮಾಡಲಾಗುತ್ತಿದೆ. ಗುಂಪು ಗುಂಪಾಗಿ ಹೋಗುವುದು, ಗುಂಪಾಗಿ ಸೇರುವುದು ಸಂಪೂರ್ಣವಾಗಿ ತಡೆಯಲಾಗಿದ್ದು, ಹಬ್ಬ ಆಚರಣೆಗೆ ಅಡ್ಡಿ ಉಂಟಾಗಿದೆ. ಹಾಲು, ಹಣ್ಣು, ತರಕಾರಿ ದಿನ ಬಳಕೆಯೆ ಸಾಮಾನುಗಳನ್ನು ಖರೀದಿ ಮಾಡುವುದಕ್ಕೂ ಜನ ಯೋಚನೆ ಮಾಡುತ್ತಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 519ಕ್ಕೇರಿಕೆಯಾಗಿದ್ದು, 11 ಜನ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸೋಕಿತರ ಸಂಖ್ಯೆ 42ಕ್ಕೇರಿಕೆಯಾಗಿದೆ. ಹೀಗಾಗಿ ಯುಗಾದಿ ಹಬ್ಬದ ಶುಭಾಶಯಕ್ಕಿಂತ ಜನ ಕೊರೊನಾದಿಂದಾ ನಿಮ್ಮನ್ನ ನೀವು ಕಾಪಾಡಿ ಮನೆ ಬಿಟ್ಟು ಹೊರಬರಬೇಡಿ ಸೋಂಕು ಹರಡಬೇಡಿ. ಹ್ಯಾಂಡ್ ವಾಶ್ ಮಾಡಿಕೊಳ್ಳಿ, ಮುಖಕ್ಕೆ ಮಾಸ್ಕ್ ಹಾಕಿ ಎನ್ನುವ ವಿಷಯಗಳನ್ನೇ ಶುಭಾಶಯಗಳಾಗಿ ಬಳಕೆ ಮಾಡುತ್ತಿದ್ದಾರೆ. ಆ ಮೂಲಕ ಕೊರೊನಾ ಹೆಚ್ಚಾಗಿ ಹರಡದಂತೆ ದೇಶವನ್ನು ರಕ್ಷಿಸಿ ಅದೇ ಯುಗಾದಿ ಹಬ್ಬಕ್ಕೆ ನೀವು ಹಂಚುವ ಸಿಹಿ.

ಒಟ್ಟಿನಲ್ಲಿ ಹಬ್ಬ ಆಚರಣೆಗೆ ಕೊರೊನಾ ತಡೆಯನ್ನುಂಟು ಮಾಡಿದ್ದಂತು ನಿಜ.