ತಲೆಮೇಲೆ ಕೊರೊನಾ ಹೆಲ್ಮೆಟ್‌, ರಸ್ತೆಯಲ್ಲಿ ಕೊರೊನಾ ಅವೇರ್ನೆಸ್‌

ಕೊರೊನಾ ವೈರಸ್‌ ಇಡೀ ಜಗತ್ತಿನಾದ್ಯಂತ ತಾಂಡವವಾಡುತ್ತಿದೆ. ಬಡವರಿಂದ ಉಳ್ಳವರವರೆಗೂ ಎಲ್ಲರೂ ಕೊರೊನಾ ವೈರಸ್‌ನ ಆರ್ಭಟಕ್ಕೆ ಭೀತರಾಗಿ ಕುಳಿತಿದ್ದಾರೆ. ಭಾರತದಲ್ಲಿ 21 ದಿನಗಳ ಕಾಲ ಲಾಕ್‌ಔಟ್‌ ಘೋಷಿಸಿದ್ದು, ಯಾರೂ ಮನೆಯಿಂದ ಹೊರಬರುವಂತಿಲ್ಲ ಎಂದು ಆದೇಶಿಸಲಾಗಿದೆ.  ಈ ತುರ್ತು ಘೋಷಣೆಯಿಂದಾಗಿ ಹಲವಾರು ಜನರು ತಮಗೆ ಬೇಕಾದ ಅತ್ಯಾವಶ್ಯಕ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಲಾಗದೆ, ಊರಿಂದೂರಿಗೆ ಗುಳೆ ಬಂದವರು ತಮ್ಮೂರಿಗೆ ಹಿಂದಿರಗಲೂ ಆಗದೆ ಪರದಾಡುತ್ತಿದ್ದಾರೆ.

ಕೆಲವರು ಏನಾದರೂ ಸಿಕ್ಕರೆ ಕೊಂಡು ತರಲು ಅಂಗಡಿಗಳನ್ನು ಹುಡುಕಿತಿದ್ದರೆ, ಮತ್ತೂ ಕೆಲವರು ಊರ ಹಾದಿ ಹುಡುಕಿ ಹೊರಟಿದ್ದಾರೆ. ಹೀಗೆಲ್ಲಾ ಬೀದಿಗೆ ಬಂದವರನ್ನು ಪೋಲೀಸರು ಅಡ್ಡಗಟ್ಟಿ ತಮ್ಮ ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಮಕ್ಕಳಿದ್ದ ವಯಸ್ಸಾದ ವೃದ್ಧರವರೆಗೂ ಹಿಂದೆ ಮುಂದೆ ನೋಡದೇ ಬಾಸುಂಡೆಗಳ ಅವರ ಬೆನ್ನಮೇಲೆ ಕೊರೊನಾ ಸಂಕಷ್ಟದ ಗುರುತುಗಳನ್ನು ಮೂಢಿಸುತ್ತಿವೆ. ಪೊಲೀಸರೋ ಮಾನವೀಯತೆ ಎಂದರೇನು ಎಂಬುದನ್ನೇ ಮರೆತ ಮೃಗಗಳಂತೆ ವರ್ತಿಸುತ್ತಿದ್ದಾರೆ.

ತರಕಾರಿ ತರಲು ಹೋದವರನ್ನು ಅಡ್ಡಗಟ್ಟಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಘನಗೋರ ತಪ್ಪುಮಾಡಿದ್ದಾರೆಂಬಂತೆ ಹಿಂಸಿಸುತ್ತಿರುವುದೇ ದೇಶಾದ್ಯಂತ ಹೆಚ್ಚಾಗಿದೆ.

ಇಂತಹ ಪೊಲೀಸರ ಕ್ರೌರ್ಯದ ನಡುವೆಯೂ ಕೆಲವು ಪೊಲೀಸರು ನಿರ್ಗತಿಕರಿಗೆ, ನಿರಾಶ್ರಿತರಿಗೆ ಊಟ, ತಿಂಡಿ, ನೀರಿನ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ತಮ್ಮೊಳಗಿನ ಮಾನವೀಯತೆ ಜೊತೆಗೆ ತಮ್ಮ ಕರ್ತವ್ಯವೂ ಎಂಬಂತೆ ಬಡವರಿಗೆ ನೆರವಾಗುತ್ತಿದ್ದಾರೆ.

ಇದೆಲ್ಲದರ ನಡುವೆ ವಿಷೇಶ ಎಂಬಂತೆ ಕಾಣುತ್ತಿರುವುದು ತಮಿಳುನಾಡು ಪೊಲೀಸರ ಸೃಜನಾತ್ಮಕವಾಗಿ ಅರಿವು ಮೂಢಿಸುತ್ತಿರುವ ಕಲೆ. ರಸ್ತೆಯಲ್ಲಿ ಓಡಾಡುತ್ತಿರುವ, ಒಂದೂರಿಂದ ಮತ್ತೊಂದು ಊರಿಗೆ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಲಾಕ್‌ಡೌನ್‌ನ ಉದ್ದೇಶವನ್ನೂ, ಜನರು ಮನೆಯಿಂದ ಹೊರಬರದಂತೆ 21 ದಿನಗಳ ಕಾಲ ಮನೆಯಲ್ಲೇ ಉಳಿಯುವಂತೆ ಎಚ್ಚರಿಕೆಯ ಅರಿವು ಮೂಢಿಸಲು ಮುಂದಾಗಿದ್ದಾರೆ.

ಚೆನೈನ ಕಿಂಗ್‌ಗೌತಮ್ ಎಂಬ ಪೋಲೀಸ್‌ ಅಧಿಕಾರಿ ತಮ್ಮ ಹೆಲ್ಮೆಟ್‌ ಮೇಲೆ ಕೊರೊನಾ ವೈರಸ್‌ ರೀತಿಯಲ್ಲಿ ಡಿಸೈನ್‌ ಮಾಡಿಕೊಂಡು, ಆ ಹೆಲ್ಮೆಟ್‌ ಹಾಕಿಕೊಂಡು ರಸ್ತೆಯಲ್ಲಿ ನಿಂತು ಬರುವ ಬೈಕ್‌ ಸವಾರರನ್ನು ನಿಲ್ಲಿಸಿ, ತಾನು ಕೊರೊನಾ ನೀವು ಹೀಗೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದರೆ, ಗುಂಪುಗುಂಪಾಗಿ ಓಡಾಡುತ್ತಿದ್ದರೆ, ನಾವು ನಿಮ್ಮ ಮೇಲೆ ದಾಳಿ ಮಾಡುತ್ತೇನೆ, ನಿಮ್ಮ ಆರೋಗ್ಯವನ್ನು ಕಿತ್ತುಕೊಂಡು, ಅನಾರೋಗ್ಯಕ್ಕೆ ಅವಕಾಶವಾಗುತ್ತದೆ. ನನ್ನಿಂದ ನಿಮ್ಮ ಜೀವಕ್ಕೂ ಅಪಾಯವಾದೀತು ಎಂದು ಕೊರೊನಾ ರೀತಿಯಲ್ಲೇ ಅರಿವು ಮೂಢಿಸುತ್ತಿದ್ದಾರೆ.

ಕ್ರೌರ್ಯವನ್ನು ಮೆರೆಯುತ್ತಿರುವ ಪೊಲೀಸರಿಗೆ ಇಂತಹ ಅಧಿಕಾರಿಗಳು ಮಾದರಿಯಾಗಬೇಕು.