ಕರ್ನಾಟಕದಲ್ಲಿ ಇಂದು 3 ಜನರಲ್ಲಿ ಕೊರೊನಾ ಸೋಂಕು ಪತ್ತೆ – ಶ್ರೀರಾಮುಲು ಟ್ವೀಟ್

ಕರ್ನಾಟಕದಲ್ಲಿ ಇಂದು 3 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ.

ಕೊರೊನಾ ತಡೆಗೆ ದೇಶದ ಪ್ರಧಾನಿ ಜನತಾ ಕರ್ಫ್ಯೂ ಗೆ ಕರೆ ನೀಡಿದ್ದಾರೆ. ಇದರಿಂದ ನಾಳೆ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಕೂಡ ಹೊರಬರದಂತೆ ಸೂಚಿಸಲಾಗಿದೆ. ಮೋದಿಜಿ ಕರೆಗೆ ಓಗೊಟ್ಟು ಇಡೀ ದೇಶದ ಜನತೆ ಬಹುತೇಕ ಸಾಥ್ ನೀಡಿದೆ. ಅದಾಗಲೇ ರಾಜ್ಯದಲ್ಲಿ ಒಂದೇ ದಿನಕ್ಕೆ ಕೊರೊನಾ ವೈರಸ್ ಮೂರುಜನರಲ್ಲಿ ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ.

ಹೌದು… ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಂಡ್-19 ಅಟ್ಟಹಾಸ ಏರಿಕೆಯಾಗುತ್ತಿದೆ. ದಿನಗಳೆಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನೆನ್ನೆವರೆಗೂ 15 ಸೋಂಕಿತರ ಸಂಖ್ಯೆ ಇಂದು ದಿಢೀರನೇ 18ಕ್ಕೇರಿಕೆಯಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಇದೀಗ ಕೊರೊನಾ ಸೋಂಕಿತ ಪ್ರಕರಣ ಕುರಿತಂತೆ ಹೆಲ್ತ್ ಬುಲೆಟಿಂನ್ ಬಿಡುಗಡೆ ಮಾಡಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಇಂದು ಬೆಳಗ್ಗೆ ಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಮೆಕ್ಕಾ ಪ್ರವಾಸದಿಂದ ಬಂದ 32 ವರ್ಷದ ವ್ಯಕ್ತಿಯಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದರು. ಇದೀಗ ಮತ್ತಿಬ್ಬರಲ್ಲಿ ದೃಢಪಟ್ಟಿದೆ ಎಂದಿದ್ದಾರೆ. ನಾಗರಿಕರು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಹೆಚ್ಚು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಿನ್ನೆಯವರೆಗೆ 15 ಜನರಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಅವರಲ್ಲಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಸಚಿವರೇ ತಿಳಿಸಿದ್ದರು.

ಆರೋಗ್ಯ ಸಚಿವ ಬಿ ಶ್ರೀರಾಮುಲು ಕೂಡ ಟ್ವಿಟ್ ಮಾಡಿದ್ದು, ರಾಜ್ಯದಲ್ಲಿ ಇಂದು 3 ಜನರಲ್ಲಿ #Covid_19 ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ. ನಾಗರಿಕರು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.