ಕೊರೊನಾ ಹೆಸರಲ್ಲಿ ಉಡಾಫೆ : ನೂರು ದಿನ ರಜೆ ಕೇಳಿದ್ದನ್ನ ತಮಾಷೆ ಮಾಡಿದ್ದಾರೆಂದ ಪೇದೆ!

ಕೋಲಾರದ ಪೇದೆಯೊಬ್ಬರು ಕೊರೊನಾ ಭೀತಿ ಹಿನ್ನೆಲೆ ನೂರು ದಿನ ರಜೆ ಕೇಳಿ ಹಿರಿಯ ಪೊಲೀಸ್ ಅಧಿಕಾರಿಗೆ ಬರೆದ ಪತ್ರ ಪುಲ್ ವೈರಲ್ ಆಗುತ್ತಿದ್ದಂತೆ ಸದ್ಯ ಯುಟರ್ನ್ ಮಾಡಿದ್ದಾರೆ.

ಹೌದು.. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೋಲಿಸ್ ಠಾಣೆಯ ಪೇದೆ ಪ್ರಶಾಂತ್ ಎಂಬುವವರು ಇಲಾಖೆಗೆ ರಜೆ ಕೇಳಿ ಬರೆದ ಪತ್ರ ಸಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿತ್ತು.

ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಪ್ರವೀಣ್ ಸೂಧ್ ಅವರಿಗೆ ರಜೆ ಬೇಕೆಂದು ಮನವಿ ಮಾಡಿರುವ ಪೇದೆ. ರಾಜ್ಯದಲ್ಲಿ ಕರೋನಾ ಎಫೆಕ್ಟ್ ತ್ರೀವವಾಗಿದೆ. ನಮ್ಮ ತಂದೆತಾಯಿಗೆ ನಾನು ಒಬ್ಬನೇ ಮಗನಾಗಿದ್ದೆನೆ. ಕರೋನಾ ವೈರಸ್ ಎಂಬ ರಾಕ್ಷಸ ನಮ್ಮ ಮಗನಿಗೂ ಹರಡುತ್ತದೆ ಎಂಬ ಭಯ ನಮ್ಮ ತಂದೆತಾಯಿಯಲ್ಲಿ ಶುರುವಾಗಿದೆ.  ಆ ಕಾರಣಕ್ಕಾಗಿ ನನಗೆ ನೂರು ದಿನಗಳ ಕಾಲ ರಜೆ ಘೋಷಣೆ ಮಾಡಬೇಕೆಂದು ಪೋಲಿಸ್ ಮಹಾ ನಿರ್ದೇಶಕರಲ್ಲಿ ಮನವಿ ಮಾಡಿದ್ದರು. ಆದರೆ ಇ ಪತ್ರ ವೈರಲ್ ಆಗುತ್ತಿದ್ದಂತೆ ಕರೋನಾ ವೈರಸ್ ಸೋಂಕಿನ ಹೆಸರಲ್ಲಿ ಪೊಲೀಸ್ ಸಿಬ್ಬಂದಿ ಉಡಾಫೆ ಮಾತನಾಡಿದ್ದಾನೆ.

ನೂರು ದಿನ ರಜೆ ಕೇಳಿ ಬರೆದ ಪತ್ರ ವೈರಲ್ ಆಗ್ತಿದ್ದಂತೆ ತಮಾಷೆಗಾಗಿ ಮಾಡಲು ಹೋಗಿದ್ದಾಗಿ ಪೇದೆ ಪ್ರಶಾಂತ್ ಹೇಳ್ತಿದ್ದಾರೆ. ಸಹ ಸಿಬ್ಬಂದಿ ಜೊತೆಗೂಡಿ ಪೊಲೀಸ್ ಮಹಾ ನಿರ್ದೇಶಕರಿಗೆ ಬರೆದ ಪತ್ರ ವೈರಲ್ ಆದ ಬಳಿಕ ಪೇದೆ ಈ ರೀತಿ ಸ್ಪಷ್ಟನೆ ನೀಡಿದ್ದಾರೆ. ಮಹಾನಿರ್ದೇಶಕರಿಗೆ ಪತ್ರ ಬರೆದಿಲ್ಲವೆಂದು, ಕೇವಲ ತಮಾಷೆಗಾಗಿಯೇ ಪತ್ರವನ್ನ ಸಿಬ್ಬಂದಿ ವೈರಲ್ ಮಾಡಿದ್ದಾರೆಂದು ಸಬ್ ಇನ್ಸ್‌ಪೆಕ್ಟರ್ ಸ್ಪಷ್ಟನೆ ನೀಡಿದ್ದಾರೆ.