ಕೊರೋನ ಭೀತಿ : ಚೀನಾ ದೇಶದ ವಿದ್ಯಾರ್ಥಿಗಳಿಗೆ ರಜೆ ಕೊಟ್ಟ ಮೈಸೂರು ವಿವಿ

ವಿಶ್ವದಾದ್ಯಂತ ಕೋರೋನ ವೈರಸ್ ಭೀತಿ ಹಿನ್ನಲೆ ಮೈಸೂರಿನಲ್ಲು ಕೋರೋನಾ ವೈರಸ್ ಆತಂಕ ಶುರುವಾಗಿದೆ.

ಮೈಸೂರು ವಿವಿಯಲ್ಲಿ ಚೀನಾ ದೇಶದ ಒಟ್ಟು 120 ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ವಿಭಾಗದ ಬಿ.ಟೆಕ್ ,ಎಂ.ಎಸ್. ಪ್ರೋಗ್ರಾಮಿಂಗ್ ನ ಇನ್ಫಾರ್ಮೇಷನ್ ಟೆಕ್ನಾಲಜಿ, ಸಾಫ್ಟ್ ವೇರ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಓದುತ್ತಿದ್ದಾರೆ. ಚೀನಾದಲ್ಲಿ ಹೊಸ ವರ್ಷದ ಆಚರಣೆ ಬಹು ದೊಡ್ಡ ಆಚರಣೆ ಹೀಗಾಗಿ ಹೊಸ ವರ್ಷಾಚರಣೆಗೆ 18 ಚೀನಾ ದೇಶದ ವಿದ್ಯಾರ್ಥಿಗಳು ರಜೆ ಮೇಲೆ ಜ.15 ರಂದು ಚೀನಾಕ್ಕೆ ತೆರಳಿದ್ದಾರೆ.

ಜ.25 ರಂದು ಚೀನಾದಲ್ಲಿ ಹೊಸ ವರ್ಷಾಚರಣೆ ಇತ್ತು.  ಇದನ್ನು ಮುಗಿಸಿಕೊಂಡು ಅವರು ಈಗಾಗಲೇ ವಾಪಸ್ ಆಗಬೇಕಿತ್ತು.  ಚೀನಾದಲ್ಲಿ ಕಾಣಿಸಿಕೊಂಡ ಕರೋನಾ ವೈರಸ್ ಕಾರಣದಿಂದ ಅವರನ್ನು ಸದ್ಯಕ್ಕೆ ಮೈಸೂರಿಗೆ ಹಿಂದಿರುಗದಂತೆ ಸೂಚಿಸಲಾಗಿದೆ.  ಅವರೆಲ್ಲಾ ಚೀನಾದ ಝೂಮೇಡಿಯನ್ ( zhumadian) ಪ್ರಾವೆನ್ಸಿಸ್ ನ ಹೊಂಗೈ ( Huanghai) ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದು, ವಿದ್ಯಾರ್ಥಿ ವಿನಿಮಯ ಯೋಜನೆಯಲ್ಲಿ ಬಂದಿದ್ದರು.