Covid 19 : ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಣಿಗೆ ಸಂಗ್ರಹಿಸಲು ಮುಂದಾದ BSY

ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಕೈಜೋಡಿಸಲು ಇಚ್ಛಿಸುವ ದಾನಿಗಳು ಧನ ಸಹಾಯ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಈ ಕುರಿತಂತೆ ಪ್ರಕಟಣೆ ಹಾಗೂ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಸಚಿವಾಲಯ.

ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ, ಬೆಳಗ್ಗೆ 11.00 ಗಂಟೆವರೆಗೆ 10 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 51ಕ್ಕೇರಿದೆ. ಈ ಪೈಕಿ ಒಬ್ಬ ಸೋಂಕಿತ ಮೃತ ಪಟ್ಟಿದ್ದು, ಎಲ್ಲ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಪತ್ತೆ, ಪ್ರತ್ಯೇಕಿಸುವಿಕೆ ಮುಂದುವರೆದಿದೆ.


ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್, ಡಿಡಿ ಅಥವಾ NEFTಮೂಲಕ ದೇಣಿಗೆ ಸಲ್ಲಿಸಬಹುದು ಖಾತೆಯ ವಿವರ ಹೀಗಿದೆ: ಖಾತೆ ಹೆಸರು: CHIEF MINISTER RELIEF FUND COVID-19, STATE BANK OF INDIA, VUDHANASOUDHA BRANCH, A/c No. 39234923151, IFSC CODE: SBIN 0040277, MICR 560002419
ಡಿಡಿ ಅಥವಾ ಚೆಕ್ ಕಳುಹಿಸಲು: ನಂ. 235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001 ಇಲ್ಲಿಗೆ ಕಳಿಹುಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights