Cricket : ಗುತ್ತಿಗೆ ಪಟ್ಟಿಯಿಂದ ರಾಂಚಿ Rambo ಹೊರಕ್ಕೆ, ಬಲವಂತದ ನಿವೃತ್ತಿ ಕೊಟ್ಟ BCCI..

ಇನ್ನೂ ಅಧಿಕೃತವಾಗಿ ನಿವೃತ್ತಿಯಾಗದ ಮಾಜಿ ಕಪ್ತಾನ ಮಹೇಂದ್ರ ಸಿಮಗ್ ಧೋನಿ ಅವರಿಗೆ ಬಿಸಿಸೈ ಬಲವಂತದ ನಿವೃತ್ತಿ ನೀಡಿರುವಂತಿದೆ. ದೇಶದ ಆಟಗಾರರಿಗೆ ನೀಡುವ ಗುತ್ತಿಗೆಯ ಪಟ್ಟಿಯಿಂದ ಧೋನಿ ಅವರನ್ನು ಕೈಬಿಡಲಾಗಿದೆ.
ಬಿಸಿಸಿಐನ ಈ ಕ್ರಮದಿಂದಾಗಿ ಧೋನಿಗೆ ಒಂದು ರೀತಿಯಲ್ಲಿ ಕಡ್ಡಾಯ ನಿವೃತ್ತಿ ನೀಡಿದಂತಾಗಿದೆ. ದೇಶವನ್ನು ಪ್ರತಿನಿಧಿಸಬಲ್ಲ 30 ಆಟಗಾರರನ್ನು ಎ,ಬ,ಸಿ ಶ್ರೇಣಿಗಳಲ್ಲಿ ವರ್ಗಾಯಿಸಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಬಿಡುಗಡೆ ಮಾಡಿದೆ.

ಕಳೆದ ವಿಶ್ವಕಪ್‌ನ ನಂತರ ಅಂದರೆ ಜುಲೈ 2019ರ ನಂತರ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಹಾಗೆಂದು ಅವರು ಅಧಿಕೃತವಾಗಿ ನಿವೃತ್ತಿಯನ್ನೂ ಘೋಷಿಸಿಲ್ಲ. ಧೋನಿಯ ಮೌನ ಹಾಗೂ ಬಿಸಿಸಿಐನ ಈ ಕ್ರಮ ನಾನಾ ಧೋನಿ ಕ್ರಿಕೆಟ್ ಯಗಾಂತ್ಯದ ಸ್ಪಷ್ಟ ಸುಳಿವು ನೀಡಿದೆ.

ಧೋನಿ ಇನ್ನು ಏಕದಿನ ಮಾದರಿಯಲ್ಲಿ ಆಡಲಾರರು ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇನ್ನೊಂದು ಮೂಲದ ಪ್ರಕಾರ ಧೋನಿ ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಆಡಿ ನಂತರ ನಿವೃತ್ತಿ ಪಡೆಯುವ ಚಿಂತನೆಯಲ್ಲಿದ್ದರು ಎನ್ನಲಾಗಿದೆ.