Cricket Ind vs WI : ರಾಹುಲ್, ರೋಹಿತ್ ರಿಂದ ರನ್ ಸುರಿಮಳೆ, ಸರಣಿ ಸಮವಲ….

ಬ್ಯಾಟಿಂಗಿಗೆ ಹೇಳಿ ಮಾಡಿಸಿದ್ದ ಪಿಚ್‌ನ ಮೇಲೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ರನ್‌ಗಳ ಸುರಿಮಳೆ ಸುರಿಸುವ ಮೂಲಕ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಂಡೆಯಂತಹ ಸವಾಲು ಅಣಿಗೊಳಿಸಿದೆ.

ಇಲ್ಲಿನ ವೈಎಸ್ಆರ್‍ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರುಗಳಲ್ಲಿ ಐದು ವಿಕೆಟ್ ಕಳೆದುಕೊಂಡು 387 ರನ್ನುಗಳ ಬೃಹತ್ ಮೊತ್ತ ಪೇರಿಸಿದೆ. ಭಾರತದ ಈ ಭರ್ಜರಿ ಪ್ರದಶನಕ್ಕೆ ಆರಂಭಿಕರ ಶತಕ ಪ್ರಮುಖ ಕಾರಣ.

ಆರಂಭದಿಂದಲೇ ವಿಂಡೀಸ್ ಬೌಲರುಗಳ ಮೇಲೆ ಹರಿಹಾಯ್ದ ರಾಹುಲ್ ಮತ್ತು ರೋಹಿತ್ ಮೊದಲ ವಿಕೆಟ್ಟಿಗೆ 37 ಓವರುಗಳಲ್ಲಿ 227 ರನ್ ಕಲೆ ಹಾಕಿದರು. ಫಾರಂಗೆ ಮರಳಿರುವ ರಾಹುಲ್ 102 ಎಸೆತಗಳಲ್ಲಿ 104 ರನ್ ಗಳಿಸಿದರೇ ರೋಹಿತ್ ಶರ್ಮಾ 138 ಎಸೆತಗಳಲ್ಲಿ 159 ರನ್ ಮಾಡಿದರು.

ಇವರಿಬ್ಬರ ನಿರ್ಗಮನದ ನಂತರ ಬಿರುಗಾಳಿ ಬ್ಯಾಟಿಂಗ್ ಮಾಡಿದ ಶ್ರೈಸ್ ಅಯ್ಯರ್‍ ಅರ್ಧಶತಕ (53) ಮತ್ತೆ ಕೇವಲ 16 ಎಸೆತಗಳಲ್ಲಿ 39 ರಿಶಬ್ ಪಂತ್ ತಂಡವನ್ನು 400 ಗಡಿ ಸಮೀಪ ಕೊಂಡೊಯ್ದರು. ವಿಂಡೀಸ್ ಪರ ಕಾಟ್ರೆಲ್ ಎರಡು ವಿಕೆಟ್ ಕಿತ್ತರು.