Cricket : Inba vs NZ -ಜೇಮಿಸನ್ ದಾಳಿಗೆ ತತ್ತರಿಸಿದ ವಿರಾಟ್ ಬಳಗ, ಭಾರತ 242…

ಆರಡಿ ಆಳು ಕೈಲ್ ಜೇಮಿಸನ್ ಅವರ ಮಾರಕ ದಾಳಿಯ ಮುಮದೆ ಪತರುಗುಟ್ಟಿದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಆಘಾತ ಅನುಭವಿಸಿತು. ಆರಂಭಿಕ ಪೃಥ್ವಿ ಶಾ, ಚೇತೇಶ್ಲದವರ ಪೂಜಾರ ಮತ್ತು ಹನುಮ ವಿಹಾರಿ ಅರ್ಧಶತಕಗಳ ನಡುವೆಯೂ ಭಾರತ ತೀವ್ರ ಕುಸಿತ ಕಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಕೇವಲ 242 ರನ್ನುಗಳಿಗೆ ತನ್ನ ಮೊದಲ ಸರದಿಗೆ ಅಂತ್ಯ ಹಾಡಿತು. ಒಂದು ಹಂತದಲ್ಲಿ ಚೇತರಿಕೆಯ ಹಾದೊಇಯಲ್ಲಿದ್ದ ತಂಡಕ್ಕೆ ನುಯ್‌ಊಜಿಲೆಂಡಿನ ಹೊಸಬ ವೇಗಿ ಕೈಲ್ ಜೇಮಿಸನ್ ತೀವ್ರ ಪೆಟ್ಟು ನೀಡಿದರು. ಉತ್ತರವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೇ 63 ರನ್ ಗಳಿಸಿತ್ತು.

ಮೇಲ್ಪಂಕ್ತಿಯ ಆಟಗಾರರಾದ ಮಾಯಂಕ್ ಅಗರ್‍ವಾಲ್ 2, ನಾಯಕ ವಿರಾಟ್ ಕೊಹ್ಲಿ 3 ಹಾಗೂ ಉಪನಾಯಕ ಅಜಿಂಕ್ಯ ರಹಾನೆ 7 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದರು. ಆಕ್ರಮಣಕಾರಿ ಆಟಕ್ಕೆ ನಿಂತ ಆರಂಭಿಕ ಪೃಥ್ವಿ ಶಾ 54 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಪೂಜಾರ 54 ಮತ್ತು ಹನುಮ ವಿಹಾರಿ 56 ರನ್ ಮಾಡಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಭಾರತವನ್ನು ಕಾಡಿದ್ದ ಜೇಮಿಸನ್ 14 ಓವರುಗಳಲ್ಲಿ ಕೇವಲ 45 ರನ್ ನೀಡಿ ಐವರು ಭಾರತೀಯ ದಾಂಡಿಗರನ್ನು ಪೆವಿವಲಿಯನ್‌ಗೆ ಅಟ್ಟಿದರು. ಉಳಿದಂತೆ ಸೌಥಿ ಮತ್ತು ಬೌಲ್ಟ್ ತಲಾ ಎರಡು ವಿಕೆಟ್ ಹಾರಿಸಿದರು.