Cricket : ಭಾರತವನ್ನು ಕಾಯದ ಕನ್ನಡಿಗ ರಾಹುಲ್ ಶತಕ : whitewash ಮಾಡಿದ ಕಿವೀಸ್‌..

ಅದ್ಭುತ ಲುದಲ್ಲಿರುವ ಕೆಎಲ್ ರಾಹುಲ್ ಅವರ ಭರ್ಜರಿ ಶತಕದ ನಡುವೆಯೂ ಮೂರನೇ ಹಾಗೂ ಕಡೆಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ಸರಣಿಯಲ್ಲಿ ಒಂದು ಪಂದ್ಯ ಗೆಲ್ಲಲಾಗದೆ ಬರಿಗೈಲಿ ವಾಪಸಾಗಿದೆ.


ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ಗೆಲ್ಲಲು ಭಾರತ ಎಸೆದ 296 ರನ್ ಸವಾಲನ್ನು ಬೆದರದೇ, ಬೆಚ್ಚದೇ ಸ್ವೀಕರಿಸಿದ ನ್ಯೂಜಿಲೆಂಡ್ ದಾಂಡಿಗರು ಕೇವಲ 5 ವಿಕೆಟ್ ಕಳೆದುಕೊಂಡು 300 ರನ್ ಗಳಿಸುವ ಮೂಲಕ ಟಿ20 ಸರಣಿಯಲ್ಲಿ ಬಳಿಸಿಕೊಂಡಿದ್ದ ಸುಣ್ಣವನ್ನು ಅಳಿಸಿಕೊಂಡರು.

ನ್ಯೂಜಿಲೆಂಟಡಿನ ಈ ಭರ್ಜರಿ ಗೆಲುವಿಗೆ ಆರಂಭಿಕರಾದ ಗುಪ್ಟಿಲ್ 68, ನಿಕೋಲ್ಸ್ 80, ಗ್ರಾಂಡ್‍‍ಹೋಮ್ 58 ಅವರ ದಿಟ್ಟ ಆಟ ನೆರವಾಯಿತು. ಭಾರತದ ಪರ ಚಾಹಲ್ ಮುರು ವಿಕೆಟ್ ಕಿತ್ತರೂ ಕಿವೀಸ್ ನಾಗಾಲೋಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ತನ್ನ ನಿಗದಿತ 50 ಓವರುಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 296 ರನ್ ಕಲೆ ಹಾಕಿತು. ತಂಡ ಆರಂಭಿಕ ಕುಸಿತ ಅನುಭವಿಸಿತಾದರೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರರು ತಂಡಕ್ಕೆ ಆಸರೆಯಾದರು.

ರಾಹುಲ್​ ವೃತ್ತಿ ಬದುಕಿನ ನಾಲ್ಕನೇ ಶತಕ ದಾಖಲಿಸಿದರು. 113 ಎಸೆತದಲ್ಲಿ ರಾಹುಲ್ ಒಂಭತ್ತು ಫೋರ್​, ಎರಡು ಸಿಕ್ಸ್​ ಒಳಗೊಂಡ 112 ರನ್ ಸಿಡಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 62, ಮತ್ತು ಮನೀಶ್ ಪಾಂಡೆ 42 ರನ್ ಗಳಿಸಿದರು.