Cricket : ಪಾಕ್ ವಿರುದ್ಧ ಮತ್ತೊಂದು surgical strike, ಮತ್ತೆ ದಿಗ್ವಿಜಯ: ಅಮಿತ್ ಶಾ..

ಪಾಕಿಸ್ತಾನದ ವಿರುದ್ಧ ಮತ್ತೊಂದು ದಾಳಿ, ಮತ್ತೆ ದಿಗ್ವಿಜಯ ಎಂದು ಹೇಳುವ ಮೂಲಕ ಗೃಹ ಸಚಿವ ಅಮಿತ್ ಶಾ ವಿಶ್ವಕಪ್‌ನಲ್ಲಿ ಭಾರತದ ವಿಜಯವನ್ನು ಶ್ಲಾಘಿಸಿದ್ದಾರೆ.

ಭಾನುವಾರ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸಿ ಬೆನ್ನಿಗೇ ಗೃಹ ಮಂತ್ರಿ ಅಮಿತ್ ಶಾ ಟ್ವಿಟರ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಮೇಲೆ ಟೀಂ ಇಂಡಿಯಾದ ಮತ್ತೊಂದು ದಾಳಿ, ಮತ್ತೆ ದಿಗ್ವಿಜಯ. ಇದಕ್ಕಾಗಿ ಇಡೀ ತಂಡಕ್ಕೆ ಶುಭಾಶಯ ಎಂಬುದಾಗಿ ಶಾ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲದೇ ಇಡೀ ದೇಶ ಈ ಜಯದಲ್ಲಿ ಗರ್ವ ಪಡುತ್ತಿದೆ ಎಂದಿದ್ದಾರೆ.

ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಭಜ್‌ಋಇ ಬ್ಯಾಟಿಂಗ್ ಮತ್ತು ಮೊನಚಾದ ದಾಳಿ ನೆರವಿನಿಂದ ಭಾರತ ತಂಡವು ಡಕ್‌ವರ್ತ್‌ ಲೂಯಿಸ್ ನಿಯಮದಡಿ 89 ರನ್ನುಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದು 1992ರಿಂದ ಆರಂಭವಾದ ಜಯದ ಪರಂಪರೆಯನ್ನು ಮುಂದುವರಿಸಿತು.

ಇದು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸತತ ಏಳನೇ ಗೆಲುವಾಗಿದ್ದು, ಪಾಕಿಗರು ಒಂದೂ ಪಂದ್ಯ ಗೆದ್ದಿಲ್ಲ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಐದು ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತು. ಉತ್ತರವಾಗಿ 40 ಓವರುಗಳಲ್ಲಿ 30 ರನ್ ಗಳಿಸಬೇಕಾದ ಗುರಿ ಪಡೆಯಿತು. ಕೊನೆಗೆ ಪಾಕ್ ನಿಗದಿತ ಕೋಟಾದಲ್ಲಿ ಆರು ವಿಕೆಟ್ ಕಳೆದುಕೊಂಡು ಕೇವಲ 212 ರನ್ ಗಳಿಸಿ ಭಾರಿ ಅಂತರ ಸೋಲೊಪ್ಪಿಕೊಂಡಿತು.

ಪಾಕಿಸ್ತಾನದ ಪರ ಆರಂಭಿಕ ಆಟಗಾರ ಫಕರ್‍ ಜಮಾನ್ 62, ಬಾಬರ್‍ ಅಜಂ 48 ಹಾಗೂ ಇಮಾದ್ ವಾಸೀಂ 46 ರನ್ ಗಳಿಸಿದ್ದು ಬಿಟ್ಟರೇ ಉಳಿದವರು ವಿಫಲರಾದರು. ಭಾರತದ ಪರ ಶಂಕರ್‍, ಪಾಂಡ್ಯ ಹಾಗೂ ಯಾದವ್ ತಲಾ ಎರಡು ವಿಕೆಟ್ ಹಂಚಿಕೊಂಡರು.

ಇದಕ್ಕೆ ಮುನ್ನ ಕೊಹ್ಲಿ ಬಾಯ್ಡ್ ನಿಗದಿತ 50 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 336 ರನ್ ದಾಖಲಿಸಿದರು. 77 ರನ್ ಮಾಡಿದ ಕೊಹ್ಲಿ ಅತಿ ವೇಗದ 11 ಸಾವಿರ ರನ್ ಸರದಾರನೆನಿಸಿದ್ದೇ ಅಲ್ಲದೇ ಈ ಹಾದಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿದರು.

ಆರಂಭಿಕ ರೋಹಿತ್ ಶರ್ಮಾ ಪಂದ್ಯಾವಳಿಯ ಎರಡನೇ ಹಾಗೂ ವೃತ್ತಿಜೀವನದ 24ನೇ ಶತಕ ಬಾರಿಸಿದರು. 85 ಎಸೆತಗಳಲ್ಲಿ 9 ಬೌಂಡರಿಗಳ 3 ಸಿಕ್ಸರ್ ಸಹಾಯದಿಂದ ಪಂದ್ಯ ಪುರುಷ ರೋಹಿತ್ ಶರ್ಮಾ ಶತಕ ದಾಖಲಿಸಿದರು. ದಕ್ಷಿಣ ಆಫ್ರಿಕ ವಿರುದ್ಧ ಅಜೇಯ 122 ರನ್ ಮಾಡಿದ್ದರು.

ಅಂತಿಮವಾಗಿ ರೋಹಿತ್ ಶರ್ಮಾ 140 (140 ಎಸೆತ, 14 ಬೌಂಡರಿ ಹಾಗೂ 3 ಸಿಕ್ಸರ್) ರನ್ ಗಳಿಸಿ ನಿರ್ಗಮಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕನ್ನಡಿಗ ಕೆ ಎಲ್ ರಾಹುಲ್ 57 ರನ್ ಗಳಿಸಿ ವಹಾಬ್ ರಿಯಾಜ್ ಬೌಲಿಂಗ್ ನಲ್ಲಿ ಔಟಾದರು.

Leave a Reply

Your email address will not be published.