Cricket World Cup : ಭಾರತ-ಇಂಗ್ಲೆಂಡ್ ಮಧ್ಯೆ ಇಂದು ನಡೆಯಲಿದೆ Big fight …

ಐಸಿಸಿ ವಿಶ್ವಕಪ್ ನಲ್ಲಿ ಭಾನುವಾರ ಭಾರತ-ಇಂಗ್ಲೆಂಡ್ ಮಧ್ಯೆ ಪಂದ್ಯ ನಡೆಯಲಿದೆ. ವಿಶ್ವಕಪ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಬರ್ಮಿಂಗ್ಹ್ಯಾಮ್ ತಲುಪಿದೆ. ಈ ಮಧ್ಯೆ ಟೀಂ ಇಂಡಿಯಾ ಆಟಗಾರರಿಗೆ ಹೊಟೇಲ್ ನಲ್ಲಿ ಕಿರಿಕಿರಿಯುಂಟಾಗಿದೆ.

ಟೀಂ ಇಂಡಿಯಾ ಆಟಗಾರರು ವಾಸ್ತವ್ಯ ಹೂಡಿರುವ ಹೊಟೇಲ್ ನಲ್ಲಿಯೇ ತಂಗಿರುವ ಕೆಲ ಅಭಿಮಾನಿಗಳು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅವ್ರ ವಿರುದ್ಧ ಹೊಟೇಲ್ ಸಿಬ್ಬಂದಿ ಕಠಿಣ ಕ್ರಮಕೈಗೊಂಡಿದ್ದಾರೆ. ಹೊಟೇಲ್ ನಲ್ಲಿದ್ದ ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರ ಗೌಪ್ಯತೆ ಉಲ್ಲಂಘನೆ ಮಾಡುವ ಪ್ರಯತ್ನ ನಡೆಸಿದ್ದಾರೆ.

ಟೀಂ ಇಂಡಿಯಾ ಆಟಗಾರರು ಹಾಗೂ ಅವ್ರ ಸಂಬಂಧಿಕರ ಒಪ್ಪಿಗೆ ಪಡೆಯದೆ ಫೋಟೋ ಕ್ಲಿಕ್ಕಿಸಲು ಶುರುಮಾಡಿದ್ದಾರೆ. ಟೀಂ ಮ್ಯಾನೇಜ್ಮೆಂಟ್ ಈ ಬಗ್ಗೆ ಹೊಟೇಲ್ ಆಡಳಿತ ಮಂಡಳಿಗೆ ದೂರು ನೀಡಿದೆ. ಅಭಿಮಾನಿಗಳನ್ನು ಕರೆದು ಹೊಟೇಲ್ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಇನ್ನೊಮ್ಮೆ ಹೀಗೆ ಮಾಡಬಾರದು ಎಂದು ಸೂಚನೆ ನೀಡಿದೆ.

ಟೀಂ ಇಂಡಿಯಾ ಆಟಗಾರರು ಹಯಾತ್ ರೀಜೆನ್ಸಿ ಹೊಟೇಲ್ ನಲ್ಲಿ ತಂಗಿದ್ದಾರೆ. ಅಲ್ಲಿನ ಸಮಯ ಶುಕ್ರವಾರ 4.30‌ ಕ್ಕೆ ಘಟನೆ ನಡೆದಿದೆ. ಲಾಬಿಯಲ್ಲಿ ಕುಳಿತು ಕೂಗಾಡುತ್ತಿದ್ದ ಅಭಿಮಾನಿಗಳು ಆಟಗಾರರು ಹಾಗೂ ಅವ್ರ ಸಂಬಂದಿಕರ ಫೋಟೋ ಕ್ಲಿಕ್ಕಿಸುತ್ತಿದ್ದರು. ಅಭಿಮಾನಿಗಳು ಭಾರತದವರು ಎನ್ನಲಾಗಿದೆ.

Leave a Reply