21ದಿನ ಲಾಕ್ ಡೌನ್ : ಏನೇನು ಲಭ್ಯವಿರಲಿದೆ..? ಏನೇನಿಲ್ಲ..? ನಿಯಮ ಉಲ್ಲಂಘಿಸಿದರೆ ಏನಾಗುತ್ತೆ?

ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ನಿರ್ಣಾಯಕ ಹೊರಾಟಕ್ಕಿಳಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 24 ರ ಮಧ್ಯರಾತ್ರಿಯಿಂದ 21ದಿನಗಳ ಲಾಕ್ ಡೌನ್ ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಯಾವೆಲ್ಲ ಅಗತ್ಯ ಸೇವೆ ಲಭ್ಯ, ಯಾವ ಸೇವೆಗೆ ವಿನಾಯಿತಿ ಸಿಕ್ಕಿದೆ ಎಂಬ ಮಾರ್ಗದರ್ಶಿ ಪ್ರಕಟಣೆ ಹೊರಡಿಸಿದೆ. 21 ದಿನಗಳ ಕಾಲ ಸಂಪೂರ್ಣ ದೇಶವೇ ಲಾಕ್‌ ಡೌನ್. ಇದೊಂದು ರೀತಿಯಲ್ಲಿ ಕರ್ಫ್ಯೂ ಇದ್ದಂತೆಯೇ. ಜನರು ಮನೆಯಿಂದ ಹೊರ ಬಾರಬಾರದು. ಕೊರೊನಾ ತಡೆಯಲು ಇದು ಅನಿವಾರ್ಯವಾಗಿದೆ ಎಂದು ಮೋದಿ  ಹೇಳಿದ್ದಾರೆ. ಈಗ ಕೊರೊನಾದಿಂದ ಪಾರಾಗಲು social distancing ಒಂದೇ ಮಾರ್ಗವಾಗಿದೆ. ಜನರು ಮನೆಯಲ್ಲಿಯೇ ಇರಬೇಕು. ಇದನ್ನು ಬಿಟ್ಟು ಬೇರೆ ಮಾರ್ಗಗಳು ಇಲ್ಲ …

ಅಗತ್ಯ ಸೇವೆಗಳ ವಿವರಗಳನ್ನು ಗಮನಿಸಿದರೆ, ಕೆಲ ಕಚೇರಿಗಳಿಗೆ, ಕೆಲ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಈ ಮೂಲಕ ಜನರ ಆರೋಗ್ಯ, ಸಾಮಾಜಿಕ, ಆರ್ಥಿಕ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ.  ಲಾಕ್ ಡೌನ್ ಸಂದರ್ಭದಲ್ಲಿ ನಿಮಗೆ ನೀವು ಲಕ್ಷ್ಮಣ ರೇಖೆ ಹಾಕಿಕೊಂಡು ಮನೆಯಲ್ಲಿರಿ ಎಂದು  PM ಕಿವಿಮಾತು ಹೇಳಿದ್ದಾರೆ.

ಏನೇನು ಲಭ್ಯವಿರಲಿದೆ

* ಆಸ್ಪತ್ರೆ, ನರ್ಸಿಂಗ್ ಹೋಮ್ ಹಾಗೂ ಔಷಧಿ ಮಳಿಗೆ

* ಪೊಲೀಸ್,

* ದಿನಸಿ, ಹಾಲು, ಹಣ್ಣು, ತರಕಾರಿ ಅಂಗಡಿ

* ಮೀನು ಮತ್ತು ಮಾಂಸದಂಗಡಿ * ಅಡುಗೆ ಅನಿಲ ಪೂರೈಕೆ

* ಅಗ್ನಿಶಾಮಕ ದಳ * ಟೆಲಿಕಾಂ ಸೇವೆ. * ಇ ಕಾರ್ಮ್, ಡಿಜಿಟಲ್ ಬ್ಯಾಂಕಿಂಗ್ * ಬ್ಯಾಂಕ್ ಹಾಗೂ ಎಟಿಎಂ

* ಸಾರ್ವಜನಿಕ ಸಾರಿಗೆ ವ್ಯವಸ್ಥೆ(ನಿರ್ಬಂಧಿತ)

* ಪೆಟ್ರೋಲ್, ಡೀಸೆಲ್ ಪಂಪ್

* ಮಾಸ್ಕ್ ಹಾಗೂ ಸ್ಯಾನಿಟೈಸರ್ ಮಾರಾಟ

* ಅಂಚೆ ಕಚೇರಿ, ಸರ್ಕಾರಿ ಕಚೇರಿ * ಆರೋಗ್ಯ ಇಲಾಖೆ ಸಹಾಯಕೇಂದ್ರ

* ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ

35 ರಾಜ್ಯ, 600ಕ್ಕೂ ಅಧಿಕ ಜಿಲ್ಲೆ, ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಮಾರ್ಚ್ 31ರ ತನಕ ಲಾಕ್‌ಡೌನ್ ಘೋಷಿಸಿದ್ದವು. ಈಗ ಪ್ರಧಾನಿ ಮೋದಿ ಮಾರ್ಚ್ 24ರ ರಾತ್ರಿ 12 ಗಂಟೆಯಿಂದ ಇಡೀ ದೇಶ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದಾರೆ. ಹೀಗಾಗಿ 718ಕ್ಕೂ ಅಧಿಕ ಜಿಲ್ಲೆಗಳಲ್ಲಿರುವ 1.33 ಬಿಲಿಯನ್ ಜನರು ಲಾಕ್ ಡೌನ್ ಗೆ ಹೊಂದಿಕೊಳ್ಳಬೇಕಾಗುತ್ತದೆ. ಭಾರತದ ಶೇ 82.5 ರಷ್ಟು ಜನಸಂಖ್ಯೆ ಲಾಕ್ ಡೌನ್ ಆಗುತ್ತಿದ್ದರೆ, ಚೀನಾ ಶೇ 16.5 ರಷ್ಟು ಮಾತ್ರ ಬಂದ್ ಆಗಿತ್ತು.

ಏನೇನು ಬಂದ್ ಆಗಲಿದೆ

ಅಂತಾರಾಜ್ಯ ಬಸ್, ರೈಲು, ವಿಮಾನ ಸಂಚಾರ, ಅಂತಾರಾಜ್ಯ ಗಡಿ, ಪ್ರಯಾಣಿಕರ ರೈಲು,

ಹಾಸ್ಟೆಲ್, ಪಿಜಿ, ಹೋಟೆಲ್ ಗಳಲ್ಲಿರುವ ಪ್ರವಾಸಿಗರಿಗೆ ವಿನಾಯಿತಿ ಸಿಕ್ಕಿದೆ.

ಮೆಟ್ರೋ ಸೇವೆ, ಮಾಲ್, ಮಳಿಗೆ, ಥಿಯೇಟರ್, ಸಭೆ, ಸಮಾರಂಭ,

ಹೋಟೆಲ್ , ರೆಸ್ಟೋರೆಂಟ್, ಪಬ್, ಕ್ಲಬ್ ಬಂದ್ ಆಗಲಿದೆ.

* ಎಲ್ಲಾ ಶಿಕ್ಷಣ ಸಂಸ್ಥೆ, ತರಬೇತಿ ಕೇಂದ್ರ, ರಿಸರ್ಚ್, ಕೋಚಿಂಗ್ ಕೇಂದ್ರ ಬಂದ್ ಆಗಿವೆ.

* ಎಲ್ಲಾ ಧಾರ್ಮಿಕ ಕೇಂದ್ರ, ಪ್ರವಚನ ಮಂದಿರ, ಮಸೀದಿ, ಚರ್ಚ್ ಬಂದ್.

* ಅಂತ್ಯಕ್ರಿಯೆ ಸಂದರ್ಭದಲ್ಲಿ 20ಕ್ಕಿಂತ ಅಧಿಕ ಮಂದಿ ಸೇರುವಂತಿಲ್ಲ

* ಎಲ್ಲಾ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ, ಶೈಕ್ಷಣಿಕ ಸಭೆ, ಸಮಾರಂಭ ಬಂದ್.

ನಿಯಮ ಉಲ್ಲಂಘಿಸಿದರೆ ಏನು? ಮನೆಯಲ್ಲಿರದೆ ಹೊರಗಡೆ ತಿರುಗಾಡಿ ಎಲ್ಲರೊಂದಿಗೆ ಕಲೆತು ಬೆರೆತು ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಅಂಥ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿಸಲಾಗುತ್ತೆ. ಒಂದು ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲಾಗುತ್ತದೆ. * ಸುಳ್ಳು ಸುದ್ದಿ ಹಬ್ಬಿಸಿ, ಲಾಕ್ ಡೌನ್ ನಿಯಮ ಮೀರಿದರೆ 2 ವರ್ಷ ತನಕ ಜೈಲುವಾಸ ಅನುಭವಿಸಬೇಕಾಗುತ್ತದೆ.