Currency 2000 : 2000 ನೋಟು ವಾಪಸ್‍ಗೆ Indian bank ನಿರ್ಧಾರ: ಉಳಿದ ಬ್ಯಾಂಕುಗಳ?

ಗ್ರಾಹಕ ಸ್ನೇಹಿ ಅಲ್ಲದಿರುವ ಕಾರಣಕ್ಕೆ 2000 ರೂಮುಖಬೆಲೆಯ ನೋಟುಗಳನ್ನು ಎಟಿಎಂಗಳಿಂದ (ಕಾಸುಗೂಡು) ಹಿಂಪಡೆಯಲು ಇಂಡಿಯನ್ ಬ್ಯಾಂಕ್ ನಿರ್ಧರಿಸಿದ್ದು, ಉಳಿದ ಬ್ಯಾಂಕುಗಳು ಸಹ ಇದೇ ದಾರಿ ತುಳಿಯುವ ಸಾಧ್ಯತೆ ದಟ್ಟವಾಗಿದೆ.

ಗ್ರಾಹಕರು ಅಪಾರ ಪ್ರಮಾಣದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕಿಗೆ ವಾಪಸ್ ನೀಡುತ್ತಿದ್ದಾರೆ. ಅದಕ್ಕೆ ಬದಲಾಗಿ ಕಡಿಮೆ ಮುಖಬೆಲೆಯ ನೋಟುಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ಎಟಿಎಂನಲ್ಲಿ ಈ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.

ಇದರಂತೆ ಮುದಿನ ತಿಂಗಳು ಅಂದರೆ ಮಾರ್ಚ್‌ ಒಂದರಿಂದ ಎಟಿಎಂಗಳಲ್ಲಿ ಎರಡು ಸಾವರಿ ರೂ ನೋಟುಗಳು ಸಿಗುವುದಿಲ್ಲ ಎಂದು ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. ಈ ಮುಖಬೆಲೆಯ ನೋಟುಗಳ ಮುದ್ರಣವೂ ತಗ್ಗಿರುವ ಹಿನ್ನೆಲೆಯಲ್ಲಿ ಉಳಿದ ಬ್ಯಾಂಕುಗಳೂ ಇದೇ ದಾರಿ ಹಿಡಿಯುವ ಸಾಧ್ಯತೆ ಹೆಚ್ಚಿದೆ.

ಮೂರು ವರ್ಷಗಳ ಹಿಂದೆ ಕಳ್ಳನೋಟು ಚಲಾವಣೆ ತಡೆಗಟ್ಟುವ ಉದ್ದೇಶದಿಂದ ನೋಟು ಅಮಾನ್ಯೀಕರಣ ನಿರ್ಧಾರ ಕೈಗೊಂಡು ಪ್ರಧಾನಿ ನರೇಂದ್ರ ಮೋದಿ ಆಗ ಇದ್ದ ಒಂದು ಸಾವಿರು ರೂ ಮುಖಬೆಲೆಯ ನೋಟುಗಳ ಬದಲಿಗೆ ಎರಡು ಸಾವಿರ ರೂ ನೋಟುಗಳ ಮುದ್ರಣಕ್ಕೆ ಆದೇಶಿಸಿದ್ದರು.