ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ ಸೀಜನ್ 2 ಗ್ರ್ಯಾಂಡ್ ಫಿನಾಲೆ

ಕನ್ನಡ ಕಿರುತೆರೆ ಲೋಕದ ಡ್ಯಾನ್ಸ್ ರಿಯಾಲಿಟಿ ಷೋಗಳಲ್ಲೇ ಹೊಸ ಛಾಪನ್ನು ಮೂಡಿಸಿದ ಜೀ ಕನ್ನಡ ವಾಹಿನಿಯ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಫ್ಯಾಮಿಲಿ ವಾರ್ ನ ಫೈನಲ್ ಅದ್ದೂರಿಯಾಗಿ ಮೂಡಿ ಬಂದಿದೆ.

ಈಗಾಗಲೇ 22 ವಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಈ ಕಾರ್ಯಕ್ರಮ 13 ಜನ ಕಲಾವಿದರ ಜೋಡಿಯೊಂದಿಗೆ ಆರಂಭವಾಗಿ, ನಂತದಲ್ಲಿ ಕಾರ್ಯಕ್ರಮದ ನಿಯಮಾನುಸಾರ 20 ನೃತ್ಯ ಸುತ್ತುಗಳ ಬಳಿಕ 10 ಜೋಡಿಗಳ ನಡುವೆ ನೃತ್ಯ ಕಾದಾಟವನ್ನು ಮುಂದುವರೆಸುತ್ತಾ ಬಂದಿತ್ತು.

ಕಳೆದ ಸೆಮಿ ಫೈನಲ್ಸ್ ನಲ್ಲಿ 10 ಜೋಡಿಗಳ ಪೈಕಿ, 5ಜೋಡಿಗಳು ಅಂದರೆ ಅನೂಪ್ ಹಾಗು ದಿಂಪಿನ, ಪ್ರೇಕ್ಷಿತ್ ಹಾಗು ಅನ್ವಿಷ, ತೇಜಸ್ ಹಾಗು ಪ್ರಣತಿ, ವಿವೇಕ್ ಹಾಗೂ ಹಿರಣ್ಮಯಿ ಮತ್ತು ಅದಿತಿ ಗ್ರಾಂಡ್ ಫಿನಾಲೆ ವೇದಿಕೆಯನ್ನು ಏರಿದ್ದಾರೆ.

ಈ ಗ್ರಾಂಡ್ ಫಿನಾಲೆ ಯು ಅದ್ದೂರಿಯಾಗಿ ಕೋಟೆ ನಾಡು ಚಿತ್ರದುರ್ಗದ ಮಹಾ ಪ್ರೇಕ್ಷರರ ನಡುವೆ ನಡೆದಿದ್ದು, ಕಾರ್ಯಕ್ರಮವು ಇದೇ ಭಾನುವಾರ ಸಂಜೆ 6 30 ಕ್ಕೆ ಪ್ರಸಾರವಾಗಲಿದೆ.