ಅಕ್ರಮ ಸಂಬಂಧಕ್ಕೆ ಮಗಳ ವಿರೋಧ : ಅತ್ಯಾಚಾರಕ್ಕೆ ಸುಪಾರಿ ಕೊಟ್ಟ ತಾಯಿ

ಪಶ್ಚಿಮ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಹಯಾತ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾಪಿ ತಾಯಿಯನ್ನು ಬಂಧಿಸಲಾಗಿದೆ. ಅಕ್ರಮ ಸಂಬಂಧಕ್ಕೆ ಮಗಳು ವಿರೋಧ ಮಾಡಿದ್ದಾಳೆಂಬ ಕಾರಣಕ್ಕೆ ಮಗಳ ಮೇಲೆಯೇ ತಾಯಿ ಅತ್ಯಾಚಾರವೆಸಗಿಸಿದ್ದಾಳೆ. ಮಗಳ ದೂರಿನ ಮೇಲೆ ಪೊಲೀಸರು ಆರೋಪಿ ತಾಯಿ ಹಾಗೂ ಅತ್ಯಾಚಾರಿಯನ್ನು ಬಂಧಿಸಿದ್ದಾರೆ.

ಪೀಡಿತೆ ತಾಯಿಗೆ ಅದೇ ಗ್ರಾಮದ ಯುವಕನ ಜೊತೆ ಅಕ್ರಮ ಸಂಬಂಧವಿತ್ತಂತೆ. ಇದನ್ನು 14 ವರ್ಷದ ಮಗಳು ವಿರೋಧಿಸಿದ್ದಾಳೆ. ಇದ್ರಿಂದ ಕೋಪಗೊಂಡ ತಾಯಿ,‌ ಪ್ರೇಮಿಯನ್ನು ಕರೆಸಿ, ಪಿಸ್ತೂಲ್ ತೋರಿಸಿ ಮಗಳನ್ನು ಬೆದರಿಸಿ ಅತ್ಯಾಚಾರವೆಸಗಿಸಿದ್ದಾಳೆ. ತಾಯಿ ಮುಂದೆಯೇ ಮಗಳ ಮಾನಭಂಗವಾಗಿದೆ.

ಈ ವಿಷ್ಯ ಸ್ಥಳೀಯರು ಹಾಗೂ ಪೀಡಿತೆ ಚಿಕ್ಕಪ್ಪನಿಗೆ ಗೊತ್ತಾಗಿದೆ. ಘಟನೆ ನಡೆದ ನಂತ್ರ ಆರೋಪಿ ನಾಪತ್ತೆಯಾಗಿದ್ದನಂತೆ. ಪ್ರಕರಣ ದಾಖಲಾಗ್ತಿದ್ದಂತೆ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply