ಅಪ್ಪನ ಮೇಲೆ ಮುನಿಸಿಕೊಂಡ ಐರಾ : ಮಗಳ ಲುಕ್ಕಿಗೆ ಶಾಕ್ ಆದ ಅಣ್ತಮ್ಮಾ…!

ಏನ್ ಲುಕ್ ಗುರು… ಕಣ್ಣಲ್ಲೇ ಗುರಾಯಿಸಿದ ರಾಕಿಂಗ್ ಸ್ಟಾರ್ ಯಶ್ ಮಗಳು ಐರಾಳನ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ರಾಕಿಂಗ್ ಸ್ಟಾರ್ ಯಶ್ ರನ್ನ ಮಗಳು ಐರಾ ಈ ರೀತಿ ಮುದ್ದುಮುದ್ದಾಗಿ ಗುರಾಯಿಸಿದ್ದು ಯಾಕೆ ಅಂತ ಗೊತ್ತಾದ್ರೆ ನೀವೇಲ್ಲರೂ ನಕ್ಕುಬಿಡ್ತೀರಾ..

ಹೌದು… ಇಂದು ಬೆಳ್ಳಂಬೆಳಗ್ಗೆ  ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಬಂದ ಯಶ್ ಹಾಗೂ ರಾಧಿಕಾ ದಂಪತಿ ಮಗಳ ಮುಡಿ ಕೊಟ್ಟಿದ್ದಾರೆ. ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿ ಹರಕೆ ತೀರಿಸಿದರು. ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಕುಳಿತು ದೇವರಿಗೆ ವಂದಿಸಿದರು. ಈ ವೇಳೆ ಜನ ಯಶ್ ಹಾಗೂ ರಾಧಿಕಾ ಅವರನ್ನ ನೋಡಲು ಮುಗಿಬಿದ್ದಿದ್ರು.

ಮುಡಿಕೊಟ್ಟ ಬಳಿಕಾ ಮನೆಯಲ್ಲಿ ಐರಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಯಶ್ ಇನ್ಟಾಗ್ರಾಂ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಹೇರ್ ಕಟ್ ಮಾಡಿದ್ದಕ್ಕೆ ಐರಾ ಮುನಿಸಿಕೊಂಡು ಸಿಟ್ಟಿನಿಂದ ತಂದೆಯನ್ನ ನೋಡಿದಂತೆ, ಯಶ್ ಮಗಳ ಲುಕ್ ನೋಡಿ ಗಾಬರಿಗೊಂಡಂತೆ ಇದೆ. ಇದಕ್ಕೆ ನೆಟ್ಟಿಗರು ಕೂಡ ಕ್ಯೂಟಾಗೇ ಕಮೇಂಟ್ ಮಾಡಿದ್ದಾರೆ. ಐರಾ ಮುನಿಸಿನ ಬಗ್ಗೆ ಐರಾ ಚಂದದ ಬಗ್ಗೆ ಹೊಗಳಿದ್ದಾರೆ.

ಯಶ್ ಈ ಫೋಟೋ ಹಾಕಿ ಅದಕ್ಕೆ, “ಐರಾ: ಅಪ್ಪ ಈಗ ಸಮ್ಮರ್ ಎಂದು ನನಗೆ ಗೊತ್ತು. ಆದರೆ ಇದು ಸಮ್ಮರ್ ಕಟ್ ಅಲ್ಲ ಎಂದು ನನಗೆ ಪಕ್ಕಾ ತಿಳಿದಿದೆ. ಅಪ್ಪ: ಸರಿ” ಎಂದು ಫನ್ನಿ ಕ್ಯಾಪ್ಷನ್ ನೀಡಿದ್ದಾರೆ.

ಸದ್ಯ ಈ ಫೋಟೋಸ್ ಭಾರೀ ವೈರಲ್ ಆಗಿದ್ದು ಬೇರೆ ಬೇರೆ ಕಾಮೆಂಟ್ ಗಳನ್ನ ಮಾಡಲು ಜನ ಶುರು ಮಾಡಿದ್ದಾರೆ. ಅಷ್ಟಕ್ಕೂ ದೇವಸ್ಥಾನದಲ್ಲಿ ಮುಡಿಕೊಟ್ಟ ಬಳಿಕ ಐರಾ ಹೇಗೆ ಕಾಣ್ತಾಯಿದ್ಲು ನೀವು ಕೂಡ ಒಂದು ಬಾರಿ ನೋಡಿ ಬಿಡಿ.