ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು….!

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಪರಿಣಿತಾ ಸಾವು ಅನುಮಾನಸ್ಪದ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಶಿವಮೊಗ್ಗದ ಫೆಸಿಟ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ ಪರಿಣಿತಾ (20) ಸಾವನ್ನಪ್ಪಿದ ದುರ್ದೈವಿ. ಪರಿಣಿತಾ ಇಂದು ಬೆಳಿಗ್ಗೆ ವಾಕಿಂಗ್ ತೆರಳಿದ್ದ ವೇಳೆ ಅಪರಿಚಿತ ವಾಹನ ಗುದ್ದಿ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಪೋಷಕರ ಒಪ್ಪುತ್ತಿಲ್ಲ.

ಕಾಲೇಜು ವತಿಯಿಂದ ಬೀರನಕೆರೆ ಬಳಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಕ್ಯಾಂಪ್ ನಡೆಸಲಾಗುತ್ತಿತ್ತು. ಈ ವೇಳೆ ಕಳೆದ ನಾಲ್ಕು ದಿನಗಳಿಂದ ಬೀರನಕೆರೆಯಲ್ಲಿ 22 ವಿದ್ಯಾರ್ಥಿಗಳ ತಂಡ ವಾಸ್ತವ್ಯ ಹೂಡಿತ್ತು. ಅಪರಿಚಿತ ವಾಹನ ಗುದ್ದಿ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿಯಾದರೂ ಪೋಷಕರು ಇದನ್ನೊಪ್ಪದೇ ತನಿಖೆಗೆ ಆಗ್ರಹಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು,  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಶವಗಾರದಲ್ಲಿ ವಿದ್ಯಾರ್ಥಿನಿ ಶವ ಇಡಲಾಗಿದೆ.

Leave a Reply

Your email address will not be published.